ಹೀರೊ ಪಟ್ಟಕ್ಕೇರಿದ ಡಾಲಿ
ಸೂರಿ ನಿರ್ದೇಶನದ ‘ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಧನಂಜಯ ಜನಪ್ರಿಯ ರಾಗಿದ್ದರು. ಆದರೆ, ಈ ಚಿತ್ರದ ಈ ಪಾತ್ರದ ಸಂಪೂರ್ಣ ಲಾಭ ಪಡೆದುಕೊಳ್ಳಲಿರುವವರು ನಿರ್ದೇಶಕ ಪ್ರಭು ಶ್ರೀನಿವಾಸ್.
ಪ್ರಭು ಶ್ರೀನವಾಸ್ ತನ್ನ ಮುಂದಿನ ಚಿತ್ರಕ್ಕೆ ‘ಡಾಲಿ’ ಎಂದು ಹೆಸರು ಇರಿಸಿದ್ದಾರೆ. ಈ ಚಿತ್ರದಲ್ಲಿ ‘ಟಗರು’ವಿನಲ್ಲಿ ಧನಂಜಯ ನಿರ್ವಹಿಸಿದ ಪಾತ್ರ ಮುಂದುವರಿಯಲಿದೆ. ಚಿತ್ರವನ್ನು ಯೋಗೇಶ್ ನಾರಾಯಣ್ ನಿರ್ಮಾಣ ಮಾಡಲಿದ್ದಾರೆ. ಇದೇ ಕಾರಣಕ್ಕೆ ನಾವು ಈ ಚಿತ್ರವನ್ನು ಲಕ್ನೋದಲ್ಲಿ ಆರಂಭಿಸಲು ನಿರ್ಧರಿಸಿದೆವು ಎಂದು ಡಿಸೆಂಬರ್ 23ರಿಂದ ಚಿತ್ರೀಕರಣ ಆರಂಭಿಸಲಿರುವ ನಿರ್ದೇಶಕ ಪ್ರಭು ಶ್ರೀನಿವಾಸ್ ಹೇಳಿದ್ದಾರೆ. ‘ಟಗರು’ವಿನಲ್ಲಿ ವಿಲನ್ ಡಾಲಿ ಪಾತ್ರವನ್ನು ಧನಂಜಯ ನಿರ್ವಹಿಸಿದ್ದರು. ಈ ಪಾತ್ರ ಚಿತ್ರದಲ್ಲಿ ಮುಂದುವರಿಯಲಿದೆ. ಆದರೆ, ಹೀರೋ ಆಗಿ. ಬದುಕಿನ ಒಂದು ತಿರುವು ಆತನನ್ನು ಹೀರೋ ಆಗಿ ಪರಿವರ್ತಿಸಲಿದೆ ಎಂದು ಪ್ರಭು ಶ್ರೀನಿವಾಸ್ ತಿಳಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಲಕ್ನೋದಲ್ಲಿ ಸುಮಾರು 25 ದಿನಗಳ ಕಾಲ ನಡೆಯಲಿದೆ. ಉಳಿದ ಅರ್ಧ ಭಾಗ ಬೆಂಗಳೂರಿನಲ್ಲಿ ನಡೆಯಲಿದೆ. ಧನಂಜಯ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ರಚಿತಾ ರಾಮ್ ಹಾಗೂ ಭವ್ಯಾ ತ್ರಿಕಾ ನಟಿಸಲಿದ್ದಾರೆ. ಭವ್ಯಾ ತ್ರಿಕಾ ಚೆನ್ನೈ ಮೂಲದ ನಟಿ. ಅವರು ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಕನಿಷ್ಠ 200 ಚಿತ್ರಗಳಲ್ಲಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಜಯಂತ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯ, ಶ್ರೀನಿವಾಸ್ ದೇವಮಾಸಮ್ ಛಾಯಾಗ್ರಹಣ, ವಿನೋದ್ ಸಾಹಸ ಈ ಚಿತ್ರಕ್ಕೆ ಇರಲಿದೆ.