ನಟ ವಿಜಯ್ ಗೆ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಸಮನ್ಸ್
ಚೆನ್ನೈ: ತೆರಿಗೆ ವಂಚನೆ ಹಾಗೂ ಫೈನಾನ್ಶಿಯರ್ ಅನ್ಬು ಚೆರಿಯನ್ ಜತೆಗೆ ಇದೆಯೆನ್ನಲಾದ ನಂಟಿನ ಆರೋಪದ ಮೇಲೆ ತಮಿಳು ನಟ ವಿಜಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಸೋಮವಾರ ಸಮನ್ಸ್ ಜಾರಿಗೊಳಿಸಿದೆ.
ಚೆನ್ನೈ ನಗರದ ಪನಯ್ಯೂರ್ ಪ್ರದೇಶದಲ್ಲಿರುವ ವಿಜಯ್ ನಿವಾಸದ ಮೇಲೆ ಕಳೆದ ಶುಕ್ರವಾರ ಐಟಿ ದಾಳಿಯ ನಂತರದ ಬೆಳವಣಿಗೆ ಇದಾಗಿದೆ.
ವಿಜಯ್ ಅಭಿನಯದ ಇತ್ತೀಚಿಗಿನ ಚಿತ್ರ 300 ಕೋಟಿ ರೂ. ಬಾಚಿಕೊಂಡಿರುವ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ. ವಿಜಯ್ ಅವರ ಫೈನಾನ್ಶಿಯರ್ ಎಂದು ಹೇಳಲಾದ ಅನ್ಬು ಅವರ ನಿವಾಸದಿಂದ ದಾಳಿ ವೇಳೆ 65 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ. ಎಜಿಎಸ್ ಸಿನೆಮಾಸ್ ಸಂಸ್ಥೆ ನಡೆಸಿದೆಯೆನ್ನಲಾದ ತೆರಿಗೆ ವಂಚನೆ ಪ್ರಕರಣದ ಕುರಿತಂತೆ ಈ ದಾಳಿ ನಡೆದಿದೆ.
Next Story