ಹಾಲಿವುಡ್ಗೆ ಶಾರುಖ್ ?
ಬಾಲಿವುಡ್ ಹೀರೋಯಿನ್ಗಳಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಾಯಕ ನಟರನ್ನು ಹಿಂದಿಕ್ಕಿ ಹಾಲಿವುಡ್ ಪ್ರವೇಶಿಸುವಲ್ಲಿ ಸಫಲರಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದೀಗ ಬಾಲಿವುಡ್ ಹೀರೋಗಳಿಗೂ ಹಾಲಿವುಡ್ ಪ್ರವೇಶಿಸುವ ಕಾಲ ಕೂಡಿ ಬಂದಿದೆ. ಹೌದು. ಸೂಪರ್ಸ್ಟಾರ್ಗಳಾದ ಶಾರುಕ್ಖಾನ್ ಹಾಗೂ ರಣಬೀರ್ ಕಪೂರ್ಗೆ ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂತಾರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್ ಒಂದರಲ್ಲಿ ನಟಿಸಲು ಆಹ್ವಾನ ಬಂದಿದೆ,
ಬಾಲಿವುಡ್ನಲ್ಲಿ ಈಗ ಹರಿದಾಡುತ್ತಿರುವ ಬಲವಾದ ವದಂತಿಗಳ ಪ್ರಕಾರ, ಅಂತಾರಾಷ್ಟ್ರೀಯ ಚಿತ್ರ ನಿರ್ಮಾಪಕ ಅಲೆಕ್ಸಿ ಪೆಟ್ರುಹಿನ್ ಇತ್ತೀಚೆಗೆ ಈ ಇಬ್ಬರೂ ಸೂಪರ್ಸ್ಟಾರ್ಗಳನ್ನು ಸಂಪರ್ಕಿಸಿ, ತನ್ನ ಮಹತ್ವಾಕಾಂಕ್ಷೆಯ ‘ವಿಐವೈ-ಜರ್ನಿ ಟು ಇಂಡಿಯಾ’ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ್ದಾ ರೆನ್ನಲಾಗಿದೆ. ಜೊತೆಗೆ ಈ ಚಿತ್ರಕ್ಕೆ ಸಹನಿರ್ಮಾಪಕ ರಾಗುವಂತೆಯೂ ಅವರು ಶಾರುಕ್ಗೆ ಕೊಡುಗೆ ನೀಡಿದ್ದಾರೆ. ಅಲೆಕ್ಸಿ ಈ ಮೊದಲು ಜಾಕಿ ಚಾನ್ ಹಾಗೂ ಅರ್ನಾಲ್ಡ್ ಶ್ವಾಸ್ನೆಗರ್ರಂತಹ ಹಾಲಿವುಡ್ ದಿಗ್ಗಜರ ಅಭಿನಯದ ಚಿತ್ರಗಳನ್ನು ನಿರ್ಮಿಸಿದ್ದರು.
ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರವು ‘ವಿಐವೈ’ ಸರಣಿಯ ಮೂರನೆ ಭಾಗವಾಗಿ ಮೂಡಿಬರಲಿದೆ. ಈ ಸರಣಿಯ ಮೊದಲನೆ ಭಾಗವು ಫಾರ್ಬಿಡನ್ ಎಂಬ ಹೆಸರಿನಲ್ಲಿ 2014ರಲ್ಲಿ ಬಿಡುಗಡೆಯಾಗಿತ್ತು. ಇದರ ಎರಡನೆ ಭಾಗ ಜರ್ನಿ ಟು ಚೈನಾ ಚಿತ್ರವು ಬಿಡುಗಡೆಗೆ ಸನ್ನಿಹಿತವಾಗಿದೆ. ಈ ಚಿತ್ರದಲ್ಲಿ ಜಾಕಿಚಾನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.