ಪಿಂಕ್ ಗೆ ವಿಶ್ವಸಂಸ್ಥೆ ಗೌರವ
‘ಬಿಗ್ಬಿ’ ಅಮಿತಾಭ್ ಬಚ್ಚನ್ ಅಭಿನಯದ ‘ಪಿಂಕ್’ ಪ್ರೇಕ್ಷಕರಿಂದಲೂ ,ವಿಮರ್ಶಕರಿಂದಲೂ ಅಪಾರ ಪ್ರಶಂಸೆಗಿಟ್ಟಿಸಿಕೊಂಡಿದೆ. ಅಷ್ಟೇ ಅಲ್ಲದೆ ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಗಳಿಕೆ ಮಾಡಿದೆ. ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತಿತರ ಅಪರಾಧ ಸಮಸ್ಯೆಗಳ ಬಗ್ಗೆ ಈ ಚಿತ್ರವು ಬೆಳಕು ಚೆಲ್ಲಿದೆ.
ಇದೀಗ ‘ಪಿಂಕ್’ ಚಿತ್ರಕ್ಕೆ ವಿಶ್ವಸಂಸ್ಥೆಯ ಗೌರವ ಕೂಡಾ ಸಂದಿದೆ. ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ವಿಶೇಷ ಪ್ರದರ್ಶನಕ್ಕಾಗಿ ‘ಪಿಂಕ್’ ಚಿತ್ರಕ್ಕೆ ಆಹ್ವಾನ ದೊರೆತಿದೆ. ಈ ವಿಷಯವನ್ನು ಅಮಿತಾಭ್ ಸ್ವತಃ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ‘ಪಿಂಕ್’ನಲ್ಲಿ ಲೈಂಗಿಕ ಕಿರುಕುಳಕ್ಕೆ ಸಿಲುಕುವ ಮೂವರು ಮಹಿಳೆಯರ ವಿರುದ್ಧ ಹೋರಾಡುವ ವೃದ್ಧ ನ್ಯಾಯಾಧೀಶನಾಗಿ ಅಮಿತಾಭ್ ನಟಿಸಿದ್ದರು.
ಈ ವರ್ಷದ ಸೆಪ್ಟ್ಟಂಬರ್ 16ರಂದು ತೆರೆಕಂಡ ‘ಪಿಂಕ್’ ಚಿತ್ರದಲ್ಲಿ ತಪ್ಸಿ ಪನ್ನು, ಆ್ಯಂಡ್ರಿಯಾ ತಾರಿಯಾಂಗ್ ಹಾಗೂ ಕೀರ್ತಿ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಅನಿರುದ್ಧ ರಾಯ್ ಚೌಧುರಿ ಚಿತ್ರದ ನಿರ್ದೇಶಕರು.