ಸಂಜಯ್ ದತ್ ರ ಆರುವರ್ಷದ ಪುತ್ರ ಈಗ ಸಿನೆಮಾ ನಟ
ಮುಂಬೈ: ಮುಂಬೈ ಸರಣಿ ಸ್ಫೋಟದ ಆರೋಪದಲ್ಲಿ ಜೈಲಿನಲ್ಲಿರುವ ಬಾಲಿವುಡ್ ತಾರೆ ಸಂಜಯ್ದತ್ರ ಆರು ವರ್ಷದ ಮಗ ಸಿನೆಮಾಕ್ಕೆ ಕಾಲಿಡಲು ಸಿದ್ಧನಾಗಿದ್ದಾನೆ.ಪುಟ್ಟ ಶಹ್ರಾನ್ಗೆ ಆರು ವರ್ಷ ಪ್ರಾಯ ಮಾತ್ರ ಆಗಿದೆ. ಇಷ್ಟರಲ್ಲೇ ಅವನು ಅಪ್ಪನ ಕಾರ್ಯಕ್ಷೇತ್ರವಾದ ಸಿನೆಮಾರಂಗ ಪ್ರವೇಶಿಸುತ್ತಿದ್ದಾನೆ.
ಹಳೆಯ ರಾಜ್ ಕಪೂರ್ ಸಿನೆಮಾದ ಕ್ಲಾಸಿಕ್ ಹಾಡುಗಳಲ್ಲಿ ಶಹ್ರಾನ್ನ ಅಭಿನಯವಿದೆ ಎನ್ನಲಾಗಿದೆ. ಹಸ್ಮುಕ್ ಪಿಗಲ್ಗಯೆ ಎಂಬ ಚಿತ್ರದಲ್ಲಿ ಕಿಸಿ ಕೀ ಮುಸ್ಕರಾಹತೋಂ ಎಂಬ ಹಿಟ್ ಹಾಡನ್ನು ಸಿನೆಮಾಕ್ಕೆ ರಿ ಮಿಕ್ಸ್ ಮಾಡಲಾಗುತ್ತಿದೆ.
ಈ ಸಿನೆಮಾದ ಪ್ರದರ್ಶನ ದಿನಾಂಕ ಇನ್ನಷ್ಟೆ ನಿರ್ಧರಿಸಬೇಕಾಗಿದೆ. ಪ್ರಸಿದ್ಧ ನಿರ್ದೇಶಕ ಒ.ಪಿ. ರಲ್ಹಾರ ಮೊಮ್ಮಗ ಅರ್ಮಾನ್ ಚಿತ್ರದಲ್ಲಿ ನಾಯಕನಾಗಿದ್ದಾರೆ. ದತ್ರ ಕಂಪೆನಿ ಸಿನೆಮಾ ನಿರ್ಮಿಸುತ್ತಿದೆ. ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ದತ್ ಈ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳ್ಳಲಿದ್ದಾರೆ. ಇದೇ ವೇಳೆ ದತ್ರಿಗಾಗಿ ಸಿನೆಮಾ ಪ್ರೋಜೆಕ್ಟ್ಗಳು ತೆರೆಮರೆಯಲ್ಲಿ ಸಿದ್ಧಗೊಳ್ಳುತ್ತಿವೆ.
Next Story