1,500 ಕೋಟಿಯ ಸಾಮ್ರಾಜ್ಯ: ‘ಬಾಹುಬಲಿ’ಗೆ ಪಾಕಿಸ್ತಾನದಲ್ಲೂ ಬಲ
ಹೊಸದಿಲ್ಲಿ, ಮೇ 18: ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವ ‘ಬಾಹುಬಲಿ-2’ ಇದೀಗ ಮತ್ತೊಂದು ಮೈಲುಗಲ್ಲನ್ನು ಕ್ರಮಿಸಿದೆ. ಮೊನ್ನೆ ಮೊನ್ನೆಯವರೆಗೂ ಸಾವಿರ ಕೋಟಿ ಗಳಿಕೆಯ ಭಾರತದ ಏಕಮಾತ್ರ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ‘ಬಾಹುಬಲಿ-2’ ಒಂದೂವರೆ ಸಾವಿರ ಕೋಟಿಯ ಗಳಿಕೆಯನ್ನು ಮೀರಿದೆ.
ಭಾರತ ಮಾತ್ರವಲ್ಲದೆ, ಪಾಕಿಸ್ತಾನದ ಸುಮಾರು 100 ಥಿಯೇಟರ್ ಗಳಲ್ಲಿ ‘ಬಾಹುಬಲಿ-2’ ಪ್ರದರ್ಶನವಾಗುತ್ತಿದೆ. ಅಷ್ಟೂ ಸ್ಕ್ರೀನ್ ಗಳಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು, ಬಾಹುಬಲಿಯ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಮೇ ಆರಂಭದಲ್ಲಿ ಪಾಕಿಸ್ತಾನದಲ್ಲೂ ತೆರೆಕಂಡಿರುವ ‘ಬಾಹುಬಲಿ-2’ ಈಗಾಗಲೇ 5 ಕೋಟಿ ರೂ. ಗಳಿಸಿದೆಯಂತೆ. ಭಾರತದ ಚಿತ್ರವೊಂದು ಪಾಕಿಸ್ತಾನದಲ್ಲೂ ಉತ್ತಮ ಗಳಿಕೆ ನಡೆಸುತ್ತಿರುವುದು ವಿಶೇಷವೇ ಸರಿ.
Next Story