ನೇತಾಜಿ ಪಾತ್ರದಲ್ಲಿ ಮಿಂಚಲಿದ್ದಾರೆ 'ರಾಬ್ತಾ'ದ 324 ಹರೆಯದ ಮುದುಕ
ಹೊಸದಿಲ್ಲಿ, ಮೇ 27: ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಒಬ್ಬ ಅದ್ಭುತ ಪ್ರತಿಭೆ. ತಮ್ಮ ಸಹಜ ನಟನೆಯಿಂದ ಅಭಿಮಾನಿಗಳ ಮನಗೆದ್ದ ಇವರ "ರಾಬ್ತಾ" ಚಿತ್ರದ ಗೆಟಪ್ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ರಾಜ್ ಕುಮಾರ್ ಅವರು ಮತ್ತೊಂದು ಚಿತ್ರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಪಾತ್ರದಲ್ಲಿ ತೆರೆಯ ಮೇಲೆ ಮಿಂಚಲು ತಯಾರಾಗಿದ್ದಾರೆ.
ನೇತಾಜಿ ಅವರ ಸಾವಿನ ರಹಸ್ಯ ಇನ್ನೂ ಬಹಿರಂಗವಾಗದಿರುವ ನಡುವೆಯೇ ನೇತಾಜಿ ಅವರ ಜೀವನ ಆಧಾರಿತ ಈ ಸಿನಿಮಾ ಕೂಡಾ ದೇಶವ್ಯಾಪಿ ಕುತೂಹಲ ಸೃಷ್ಟಿಸಿದೆ. ಸುಭಾಶ್ಚಂದ್ರ ಬೋಸ್ ಪಾತ್ರಕ್ಕಾಗಿ ಅರ್ಧ ತಲೆ ಬೋಳು ಮಾಡಿಸಿರುವ ರಾಜಕುಮಾರ್ ರಾವ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
Next Story