ರಾಕೇಶ್ ಶರ್ಮಾ ಕುರಿತ ಆಮಿರ್ ಹೊಸ ಚಿತ್ರದ ಹೆಸರೇನು ಗೊತ್ತೇ ?
ಆಮಿರ್ ಪತ್ನಿ ಪಾತ್ರಕ್ಕೆ ಈ ಹೊಸ ಸ್ಟಾರ್ !
ಮುಂಬೈ,ಜೂ.10 : ಭಾರತದ ಮೊತ್ತ ಮೊದಲ ಗಗನಯಾತ್ರಿ ರಾಕೇಶ್ ಶರ್ಮ ಆವರ ಜೀವನಾಧರಿತ ಚಲನಚಿತ್ರ ‘ಸೆಲ್ಯೂಟ್’ ನಿರ್ಮಿಸಲು ನಟ ಆಮಿರ್ ಖಾನ್ ಅವರು ಸಿದ್ಧಾರ್ಥ್ ರಾಯ್ ಕಪೂರ್ ಹಾಗೂ ರಾನ್ನಿ ಸ್ಕ್ರೂವಾಲ ಜತೆ ಕೈಜೋಡಿಸಿದ್ದಾರೆ. ಮೂವರೂ ಈ ಚಿತ್ರವನ್ನು ಜತೆಯಾಗಿ ತಂತಮ್ಮ ಬ್ಯಾನರ್ ಗಳಡಿಯಲ್ಲಿ (ಎ ಕೆ ಪಿ, ಆರ್ ಎಸ್ ವಿ ಪಿ ಹಾಗೂ ರಾಯ್ ಕಪೂರ್ ಫಿಲಂಸ್) ನಿರ್ಮಿಸಲಿದ್ದಾರೆ.
ಈ ಚಿತ್ರದಲ್ಲಿ ಆಮಿರ್ ಪತ್ನಿಯಾಗಿ ಫಾತಿಮಾ ಸನಾ ಶೇಖ್ ನಟಿಸಲಿದ್ದಾರೆಂಬ ಮಾಹಿತಿಯಿದೆ. ದಂಗಲ್ ನಂತರ ಆಮಿರ್ ಖ್ಯಾತನಾಮರೊಬ್ಬರ ಜೀವನಾಧರಿತ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ದಂಗಲ್ ಚೀನಾದಲ್ಲಿ ಭಾರೀ ಯಶಸ್ಸು ಪಡೆದಿದ್ದು ಇದರಿಂದ ಆಮಿರ್ ಮತ್ತಷ್ಟು ಉತ್ತೇಜಿತರಾಗಿದ್ದಾರೆ, ನನ್ನ ಚಿತ್ರಗಳು ಹಾಗೂ ನನ್ನ ಉತ್ತಮ ಕೆಲಸಗಳು ಜನರನ್ನು ನನಗೆ ಹತ್ತಿರವಾಗಿಸಿದೆ ಎಂದು ಆಮಿರ್ ಹೇಳುತ್ತಾರೆ.
ತಮ್ಮ ಹೊಸ ಚಿತ್ರ ಸೆಲ್ಯೂಟ್ ಸಹ ನಿರ್ಮಾಪಕರಾದ ಸಿದ್ಧಾರ್ಥ್ ಮತ್ತ ರಾನಿ ಜತೆ ಆಮಿರ್ ಈ ಹಿಂದೆ ದಂಗಲ್ ಹೊರತಾಗಿ ಪೀಕೆ, ಡೆಲ್ಲಿ ಬೆಲ್ಲಿ, ರಂಗ್ ದೇ ಬಸಂತಿ ನಿರ್ಮಿಸಿದ್ದರು. ‘ಸೆಲ್ಯೂಟ್’ ಚಿತ್ರವನ್ನು ಮಹೇಶ್ ಮಥಾಯಿ ನಿರ್ದೇಶಿಸಲಿದ್ದಾರೆ.