ಬಿಡುಗಡೆಗೂ ಮುನ್ನ 'ಬಾಹುಬಲಿ-2' ದಾಖಲೆ ಮುರಿದ 'ಟ್ಯೂಬ್ ಲೈಟ್'
ಹೊಸದಿಲ್ಲಿ, ಜೂ.16: ಸಲ್ಮಾನ್ ಖಾನ್ ಅಭಿನಯದ ಶೀಘ್ರದಲ್ಲೇ ತೆರೆಕಾಣಲಿರುವ "ಟ್ಯೂಬ್ ಲೈಟ್" ಚಿತ್ರ ಬಿಡುಗಡೆಗೂ ಮುನ್ನ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ-2 ನ ದಾಖಲೆಯನ್ನು ಮುರಿದಿದೆ. ಆದರೆ ಇದು ಗಳಿಕೆಯ ವಿಚಾರದಲ್ಲಲ್ಲ, ಬದಲಾಗಿ ಚಿತ್ರಮಂದಿರಗಳ ಲೆಕ್ಕಾಚಾರದಲ್ಲಿ. ಬಾಹುಬಲಿ-2 ಚಿತ್ರ ವಿಶ್ವಾದ್ಯಂತ 9,000 ಚಿತ್ರಮಂದಿರಗಳಲ್ಲಿ ತೆರೆಕಂಡು ದಾಖಲೆ ಬರೆದಿತ್ತು. ಟ್ಯೂಬ್ ಲೈಟ್ ಈ ದಾಖಲೆಯನ್ನು ಮುರಿದು 10,000 ತೆರೆಗಳಲ್ಲಿ ಪ್ರದರ್ಶನ ಕಾಣಲಿದೆ.
'ಟ್ಯೂಬ್ ಲೈಟ್' ಚಿತ್ರ ಜೂ.23ರಂದು ಬಿಡುಗಡೆಯಾಗಲಿದೆ. ಯುದ್ಧಭೂಮಿಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಸಲ್ಮಾನ್ ಖಾನ್, ಅವರ ಸಹೋದರ ಸೊಹೈಲ್ ಖಾನ್ ನಟಿಸಿದ್ದಾರೆ. 1962ರಲ್ಲಿ ಭಾರತ ಚೀನಾ ಯುದ್ಧದ ಸನ್ನಿವೇಶವೇ ಚಿತ್ರ ಕಥಾಹಂದರ ಎನ್ನಲಾಗಿದೆ.
Next Story