ಶಾರೂಕ್ ಖಾನ್ ಚಿತ್ರಕ್ಕೆ ನಾಮಕರಣ
‘ಏಕ್ ಥಾ ಟೈಗರ್’, ಬಜರಂಗಿ ಭಾಯ್ ಸೂಪರ್ಹಿಟ್ ಚಿತ್ರಗಳನ್ನು ನೀಡಿರುವ ಇಮ್ತಿಯಾಝ್ ಅಲಿ, ಬಾಲಿವುಡ್ ಬಾದ್ ಶಾ ಶಾರೂಕ್ಖಾನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆಂಬ ಸುದ್ದಿಕೇಳಿಯೇ ಬಾಲಿವುಡ್ ಚಿತ್ರಪ್ರೇಮಿಗಳು ಸಖತ್ ಥ್ರಿಲ್ ಆಗಿದ್ದರು. ಚಿತ್ರೀಕರಣ ಪೂರ್ಣಗೊಂಡರೂ ಸಿನೆಮಾದ ಟೈಟಲ್ ಮಾತ್ರ ಇಡುವುದು ಬಾಕಿಯಾಗಿತ್ತು. ಅಂತೂ ಕೊನೆಗೂ ಚಿತ್ರಕ್ಕೆ ಜಬ್ ಹ್ಯಾರಿ ಮೆಟ್ ಸೇಜಾಲ್ ಎಂದು ಹೆಸರಿಡಲಾಗಿದೆ. ಅನುಷ್ಕಾ ಶರ್ಮಾ ಚಿತ್ರದ ನಾಯಕಿ. ರಬ್ ನೇ ಬನಾ ದಿ ಜೋಡಿ ಳಿಕ ಅನುಷ್ಕಾ ಶರ್ಮ ಶಾರೂಕ್ ಜೊತೆ ನಟಿಸುತ್ತಿರುವ ಎರಡನೆ ಚಿತ್ರ ಇದಾಗಿದೆ.
ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿರುವ ಜಬ್ ಹ್ಯಾರಿ ಮೆಟ್ ಸೇಜಾಲ್ ನ್ನು ಶಾರೂಕ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಚಿತ್ರವು ಆಗಸ್ಟ್ 4ರಂದು ತೆರೆಕಾಣಲಿದೆ.
Next Story