ಟಬೂ ರಿಟರ್ನ್ಸ್
ಟಬೂ ಪಾತ್ರಗಳ ವಿಷಯದಲ್ಲಿ ಅತ್ಯಂತ ಚ್ಯೂಸಿ. ಉತ್ತಮ ಪಾತ್ರಗಳು ದೊರೆತಲ್ಲಿ ಮಾತ್ರವೇ ಆಕೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರೆ. ಹೈದರ್ ಚಿತ್ರದಲ್ಲಿ ಆಕೆಯ ಅಭಿನಯ ಭಾರೀ ಪ್ರಶಂಸೆಯನ್ನು ಗಳಿಸಿತ್ತು. ಆನಂತರ ಆಕೆ ನಟಿಸಿದ್ದು ದೃಶ್ಯಂನ ಹಿಂದಿ ರಿಮೇಕ್ನಲ್ಲಿ. 2015ರಲ್ಲಿ ತೆರೆಕಂಡ ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲವಾದರೂ, ಪೊಲೀಸ್ ಅಧಿಕಾರಿಣಿ ಪಾತ್ರದಲ್ಲಿ ತಬು ಅದ್ಭುತವಾಗಿಯೇ ಮಿಂಚಿದ್ದರು. ಎರಡು ವರ್ಷಗಳ ಬಳಿಕ ಟಬೂ ಮತ್ತೆ ಬಾಲಿವುಡ್ಗೆ ಮರಳಿದ್ದ್ಜಾರೆ. ರೋಹಿತ್ಶೆಟ್ಟಿ ನಿರ್ದೇಶನದ ಗೋಲ್ಮಾಲ್ ಎಗೇನ್ ಚಿತ್ರದಲ್ಲಿ ಆಕೆ ಅನಾಥಾಲಯ ವೊಂದರ ವಾರ್ಡನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್ಹಿಟ್ ಚಿತ್ರ ಗೋಲ್ಮಾಲ್ ರಿಟರ್ನ್ಸ್ನ, ಮುಂದುವರಿದ ಭಾಗವಾದ ಈ ಚಿತ್ರಕ್ಕೆ ಅಜಯ್ದೇವಗನ್ ಹೀರೋ. ಪರಿಣತಿಚೋಪ್ರಾ, ಅರ್ಶದ್ ವಾರ್ಸಿ,ಕುನಾಲ್ ಖೇಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಶಾಂತಸ್ವಭಾವದ, ಸ್ನೇಹಪೂರ್ಣ ವ್ಯಕ್ತಿತ್ವದ ವಾರ್ಡನ್ ಆಗಿ ಟಬೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕಥೆಗೆ ಆಕೆಯ ಪಾತ್ರವೇ ಆಧಾರಸ್ತಂಭವಾಗಲಿದೆಯೆಂದು ನಿರ್ದೇಶಕ ರೋಹಿತ್ಶೆಟ್ಟಿ ಹೇಳಿದ್ದಾರೆ. ಎಂತಹ ಸಂಕೀರ್ಣ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ತಬೂಗೆ ಗೋಲ್ಮಾಲ್ ಎಗೇನ್ ಹೊಸ ಇಮೇಜ್ ತಂದುಕೊಡಲಿದೆಯೆಂದು ರೋಹಿತ್ ಭರವಸೆ ವ್ಯಕ್ತಪಡಿಸತ್ತಾರೆ.