ಟ್ಯೂಬ್ಲೆಟ್ ನಷ್ಟ: ವಿತರಕರಿಗೆ ಹಣ ವಾಪಸ್ ನೀಡಿದ ಸಲ್ಮಾನ್
ಸಲ್ಮಾನ್ ಅಭಿನಯದ ಟ್ಯೂಬ್ಲೈಟ್ ಬಾಕ್ಸ್ಆಫೀಸ್ನಲ್ಲಿ ಚೆನ್ನಾಗಿ ಓಡದಿರು ವುದರಿಂದ ಭಾರೀ ಮೊತ್ತ ಕೊಟ್ಟು ಚಿತ್ರವನ್ನು ಖರೀದಿಸಿದ ವಿತರಕರಿಗೆ ಅಪಾರ ನಷ್ಟ ವುಂಟಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಹಲವಾರು ವಿತರಕರು ಸಲ್ಮಾನ್ರನ್ನು ಭೇಟಿಯಾಗಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಸಲ್ಮಾನ್ ಅವರ ಮೊರೆಹೋಗಿದ್ದರು.
ಇಂತಹ ಸನ್ನಿವೇಶದಲ್ಲಿ ಮಾನವೀಯತೆ ಪ್ರದರ್ಶಿಸಿರುವ ಸಲ್ಮಾನ್ ಖಾನ್ ವಿತರಕರಿಗೆ ಗಣನೀಯ ಮೊತ್ತವನ್ನು ಮರುಪಾವತಿಸಲು ಒಪ್ಪಿಕೊಂಡಿದ್ದಾರಂತೆ.
ಬಾಲಿವುಡ್ನ ಖ್ಯಾತ ಉದ್ಯಮ ವಿಶ್ಲೇಷಕ ಕೋಮಲ್ ನಹತಾ ಅವರು ಟ್ವಿಟರ್ ಸಂದೇಶವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಟ್ಯೂಬ್ಲೈಟ್ ಚಿತ್ರದ ವಿತರಣೆಯಿಂದಾದ ನಷ್ಟವನ್ನು ಸರಿದೂಗಿಸಲು ಸಲ್ಮಾನ್ ವಿತರಕರಿಗೆ ಅವರ ಹಣವನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ. ನಿಜಕ್ಕೂ ಇದೊಂದು ಮಾನವೀಯ ನಡವಳಿಕೆ ಎಂದು ನಹತಾ ಅವರು ಶ್ಲಾಘಿಸಿದ್ದಾರೆ. ಸಲ್ಮಾನ್ ಅವರು ವಿತರಕರಿಗೆ 55 ಕೋಟಿ ಮರುಪಾವತಿಸಲು ಒಪ್ಪಿಕೊಂಡಿದ್ದಾರೆನ್ನಲಾಗಿದೆ.ಈವರೆಗೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ114.50 ಕೋಟಿ ರೂ. ಸಂಪಾದಿಸಿದೆ. ಈ ನಡುವೆ ಸಲ್ಮಾನ್ ಅವರು ಟೈಗರ್ ಜಿಂದಾ ಹೈ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.