ಒಂದು ವಾರ ಯಾರೊಂದಿಗೂ ಬೆರೆಯದೆ ಚಿಕಿತ್ಸೆ ಪಡೆಯಿರಿ: ಆಮಿರ್ ಖಾನ್, ಪತ್ನಿ ಕಿರಣ್ ಗೆ ವೈದ್ಯರ ಸೂಚನೆ
ಹೊಸದಿಲ್ಲಿ, ಆ.6: ಬಾಲಿವುಡ್ ನ ಪ್ರಸಿದ್ಧ ನಟ ಆಮಿರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಇನ್ನು ಮುಂದೆ ಒಂದು ವಾರಗಳ ಕಾಲ ಕೋಣೆಯೊಳಗೆ ಇರಬೇಕಾಗಿದ್ದು, ಯಾರನ್ನೂ ಸಂಪರ್ಕಿಸುವಂತಿಲ್ಲ. ಇದ್ಯಾವುದೋ ರಿಯಾಲಿಟಿ ಶೋ ಟಾಸ್ಕ್ ಅಥವಾ ಸಿನೆಮಾ ಪ್ರಮೋಶನ್ ಗಾಗಿ ಮಾಡಿರುವ ಗಿಮಿಕ್ ಅಲ್ಲ. ಬದಲಾಗಿ, ಈ ಇಬ್ಬರೂ ಕೋಣೆಯಲ್ಲಿರಬೇಕಾಗಿರುವುದು ಎಚ್ 1 ಎನ್ 1ನಿಂದ.
ಪಾನಿ ಫೌಂಡೇಶನ್ ನ ಸತ್ಯಮೇವ ಜಯತೆ ವಾಟರ್ ಕಪ್ ಅವಾರ್ಡ್ ನಲ್ಲಿ ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಆಮಿರ್, "ನಾನು ಹಾಗೂ ಕಿರಣ್ ಎಚ್ 1 ಎನ್ 1 ಪೀಡಿತರಾಗಿರುವುದರಿಂದ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. 7 ದಿನಗಳ ಕಾಲ ನಾವು ಕೋಣೆಯೊಳಗೆ ಇರಬೇಕೆಂದು ಹೇಳಲಾಗಿದೆ. ಒಂದು ವರ್ಷಗಳ ಕಠಿಣ ಕ್ರಮದ ನಂತರ ಸಂಭ್ರಮಾಚರಣೆಯ ಸಮಯ ಬಂದಾಗ ಅನಾರೋಗ್ಯ ಕಾಡಿದೆ. ಇದು ಸಾಂಕ್ರಾಮಿಕವಾಗಿರುವ ಕಾರಣ ಒಂದು ವಾರ ಮನೆಯಲ್ಲಿರಬೇಕಾಗಿದೆ” ಎಂದಿದ್ದಾರೆ.
ಆಮಿರ್ ಬದಲಾಗಿ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಭಾಗವಹಿಸಿದ್ದರು.
Next Story