ಮಣಿರತ್ನ ಚಿತ್ರಕ್ಕೆ ಸಾರಾ ಹೀರೋಯಿನ್
ಸೂಪರ್ಸ್ಟಾರ್ಗಳನ್ನು ಸರಿಗಟ್ಟುವ ಇಮೇಜ್ ಇರುವ ನಿರ್ದೇಶಕ ಮಣಿರತ್ನಂ ಅವರ ಹೊಸ ಚಿತ್ರ ಘೋಷಣೆಯಾಗುತ್ತಿದ್ದಂತೆಯೇ ಇಡೀ ಭಾರತೀಯ ಚಿತ್ರೋದ್ಯಮದಲ್ಲಿ ಚರ್ಚೆಗಳು ಶುರುವಿಟ್ಟುಕೊಳ್ಳುತ್ತದೆ. ಚಿತ್ರದ ನಾಯಕ ಯಾರಾಗುತ್ತಾರೆ, ಹೀರೋಯಿನ್ ಯಾರೆಂಬ ಬಗ್ಗೆ ವದಂತಿಗಳ ಸುರಿಮಳೆಯೇ ಹರಿದಾಡತೊಡಗುತ್ತಿದೆ. ಇದಕ್ಕೆ ಕಾರಣವೂ ಇದೆ. ಮಣಿರತ್ನಂ ಚಿತ್ರಗಳ ಮೂಲಕ ಹಲವಾರು ನಟ, ನಟಿಯರು ದಿಢೀರ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದೀಗ ಮಣಿರತ್ನಂ ನಿರ್ದೇಶನದ ನೂತನ ಚಿತ್ರಕ್ಕೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಆಲಿ ಖಾನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಬಲವಾದ ಸುದ್ದಿಯೊಂದು ಕೇಳಿಬರುತ್ತಿದೆ. ಟಾಲಿವುಡ್ನ ಸೂಪರ್ಸ್ಟಾರ್ ರಾಮ್ಚರಣ್ ಚಿತ್ರದ ನಾಯಕ. ತೆಲುಗು, ಹಿಂದಿಯಲ್ಲಿ ಏಕಕಾಲದಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಅಮೃತಾಸಿಂಗ್ ಅವರು ಸಾರಾಳ ತಾಯಿ. ಪ್ರಸ್ತುತ ಕರಣ್ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಎರಡನೆ ಭಾಗದಲ್ಲಿ ಸಾರಾ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಶಹೀದ್ ಕಪೂರ್ ಸಹೋದರ ಇಶಾನ್ ಈ ಚಿತ್ರದ ನಾಯಕ.