ಈ ಭಾರತೀಯ ನಟನ 8 ಚಿತ್ರಗಳು ಆಸ್ಕರ್ಸ್ ರೇಸಿಗೆ ತಲುಪಿವೆ
ವಿಶಿಷ್ಟ ದಾಖಲೆ ಯಾರದ್ದೆಂದು ಊಹಿಸಬಲ್ಲಿರಾ ?
ಹೊಸದಿಲ್ಲಿ, ಸೆ.25: ಬಾಲಿವುಡ್ ನಟ ರಾಜ್ ಕುಮಾರ್ ರಾವ್ ನಟನೆಯ ‘ನ್ಯೂಟನ್’ ಚಿತ್ರ ಭಾರತದಿಂದ ಆಸ್ಕರ್ಸ್ ಗೆ ಅಧಿಕೃತ ಪ್ರವೇಶ ಪಡೆದಿದೆ. ರಾಜ್ ಕುಮಾರ್ ರಾವ್ ಸೇರಿದಂತೆ ಇಡೀ ಚಿತ್ರತಂಡ ಇದೇ ಖುಷಿಯಲ್ಲಿರುವಂತೆ, ಮತ್ತೋರ್ವ ನಟರೊಬ್ಬರು ಎಲ್ಲರಿಗಿಂತ ವಿಶೇಷವಾಗಿದ್ದಾರೆ. ಏಕೆಂದರೆ ಈ ನಟ ಆಸ್ಕರ್ಸ್ ರೇಸಿಗೆ ತಲುಪಿದ 8 ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ನಟನ ಹೆಸರು ರಘುಬೀರ್ ಯಾದವ್. ಆಸ್ಕರ್ಸ್ ತಲುಪಿದ 8 ಭಾರತೀಯ ಚಿತ್ರಗಳಲ್ಲಿ ನಟಿಸಿದ ಕೀರ್ತಿ ಇವರದ್ದು.‘ಸಲಾಂ ಬಾಂಬೆ’, ‘ಬ್ಯಾಂಡಿಟ್ ಕ್ವೀನ್’, ‘ರುದಾಲಿ’, ‘1947:ಅರ್ತ್’, ‘ಲಗಾನ್’ ಹಾಗೂ ‘ನ್ಯೂಟನ್’ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಈ ಚಿತ್ರಗಳು ಭಾರತದಿಂದ ಆಸ್ಕರ್ಸ್ ರೇಸಿಗೆ ತಲುಪಿದ ಚಿತ್ರಗಳಾಗಿವೆ.
ಇದಲ್ಲದೆ ಇಂಡೋ ಕೆನೆಡಿಯನ್ ಚಿತ್ರ ‘ವಾಟರ್’ನಲ್ಲೂ ಅವರು ನಟಿಸಿದ್ದಾರೆ. ಈ ಚಿತ್ರ 2006ರ ಆಸ್ಕರ್ಸ್ ನಲ್ಲಿ ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ವಾಗಿ ಕೆನಡಾದಿಂದ ನಾಮಿನೇಟ್ ಆಗಿತ್ತು.
Next Story