2,900 ಕೋಟಿ ರೂ.ಗೆ ಡಾ ವಿನ್ಸಿ ಚಿತ್ರ ಖರೀದಿಸಿದ್ದು ಸೌದಿ ಯುವರಾಜ
ನ್ಯೂಯಾರ್ಕ್, ಡಿ. 8: ಕಳೆದ ತಿಂಗಳು ನಡೆದ ಹರಾಜಿನಲ್ಲಿ ದಾಖಲೆಯ 450 ಮಿಲಿಯ ಡಾಲರ್ (ಸುಮಾರು 2,900 ಕೋಟಿ ರೂಪಾಯಿ)ಗೆ ಮಾರಾಟವಾದ ಲಿಯೊನಾರ್ಡೊ ಡಾ ವಿನ್ಸಿ ಚಿತ್ರದ ನಿಜವಾದ ಖರೀದಿದಾರ ಸೌದಿ ಅರೇಬಿಯದ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಎಂಬುದಾಗಿ ‘ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿದೆ.
ಇಟಲಿಯ 16ನೆ ಶತಮಾನದ ಚಿತ್ರಕಾರನ ಭಾರೀ ಬೇಡಿಕೆಯ ಕ್ರಿಸ್ತನ ಚಿತ್ರ ‘ಸಾಲ್ವಟೋರ್ ಮುಂಡಿ’ಯನ್ನು ಖರೀದಿಸಲು ಅವರು ಮಧ್ಯವರ್ತಿಯೊಬ್ಬರನ್ನು ಬಳಸಿದ್ದರು ಎಂದು ಅಮೆರಿಕದ ಗುಪ್ತಚರ ಮೂಲಗಳು ಮತ್ತು ಇತರ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
Next Story