ಸೌದಿ: ಮಹಿಳಾ ಪ್ರಾಸಿಕ್ಯೂಟರ್ಗಳ ನೇಮಕ
ರಿಯಾದ್, ಜ. 26: ಸೌದಿ ಅರೇಬಿಯದಲ್ಲಿ ಪುರುಷ ಪ್ರಾಸಿಕ್ಯೂಟರ್ಗಳಿಗೆ ಸಮಾನವಾಗಿ ಮಹಿಳಾ ಪ್ರಾಸಿಕ್ಯೂಟರ್ಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಸೌದಿ ಅರೇಬಿಯದ ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮುಜೀಬ್ ಹೇಳಿದ್ದಾರೆ.
ಮಹಿಳೆಯರ ಖಾಸಗಿತನವನ್ನು ರಕ್ಷಿಸಬೇಕಾದ ಅಗತ್ಯವಿರುವ ಪ್ರಕರಣಗಳಲ್ಲಿ ಮಹಿಳಾ ತನಿಖಾಧಿಕಾರಿಗಳನ್ನು ಬಳಸಲಾಗುವುದು ಎಂದವರು ಹೇಳಿದರು.
2030ರ ಮುನ್ನೋಟದಂತೆ, ಮಹಿಳೆಯರು ವಹಿಸಬೇಕಾಗುವ ಪಾತ್ರಕ್ಕೆ ಪೂರಕವಾಗಿ ಈ ನೇಮಕಾತಿಗಳನ್ನು ನಡೆಸಲಾಗುತ್ತಿದೆ ಎಂದು ಅಟಾರ್ನಿ ಜನರಲ್ ತಿಳಿಸಿದರು.
Next Story