ಸೌದಿ: ರಾಜಕುಮಾರ ಅಲ್ವಲೀದ್ ಬಿಡುಗಡೆ
ರಿಯಾದ್, ಜ. 27: ಸೌದಿ ಅರೇಬಿಯದ ಬಿಲಿಯಾಧೀಶ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ರನ್ನು ಶನಿವಾರ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅವರ ಕುಟುಂಬ ಮೂಲಗಳು ಹೇಳಿವೆ.
ಎರಡು ತಿಂಗಳಿಗೂ ಹಿಂದೆ ಸೌದಿ ಅರೇಬಿಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆಯ ವೇಳೆ ಅವರನ್ನು ಬಂಧಿಸಲಾಗಿತ್ತು.
ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯ ಪ್ರಮುಖ ಭಾಗ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಇತರ ರಾಜಕುಮಾರರನ್ನು ಬಿಡುಗಡೆಗೊಳಿಸಲು ಸರಕಾರ ನಿರ್ಧರಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Next Story