ಎಮಿರೇಟ್ಸ್ ವಿಮಾನದಿಂದ ಕೆಳಕ್ಕೆ ಬಿದ್ದ ಮಹಿಳಾ ಸಿಬ್ಬಂದಿ
ದುಬೈ,ಮಾ.16: ಎಮಿರೇಟ್ಸ್ ವಿಮಾನದ ಕ್ಯಾಬಿನ್ ಮಹಿಳಾ ಸಿಬ್ಬಂದಿ ವಿಮಾನದ ತೆರೆದಿದ್ದ ಬಾಗಿಲಿನಿಂದ ಕೆಳಕ್ಕೆ ಬಿದ್ದ ಘಟನೆ ಉಗಾಂಡದ ಎಂಡೆಬ್ವೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೊರಡಲು ಸಿದ್ಧವಾಗುತ್ತಿದ್ದ ವಿಮಾನದ ತೆರೆದ ಬಾಗಿಲಿನ ಮೂಲಕ ಮಹಿಳಾ ಸಿಬ್ಬಂದಿ ಕೆಳಗೆ ಉರುಳಿ ಬಿದ್ದಿದ್ದಾರೆ ಎಂದು ಎಮಿರೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಎಮಿರೇಟ್ಸ್ ವಿಮಾನದ ವಕ್ತಾರ ತಿಳಿಸಿದರು.
ಮಹಿಳಾ ಸಿಬ್ಬಂದಿ ಎಲ್ಲಿಯವರು ಇತ್ಯಾದಿ ವಿವರಗಳನ್ನು ವಿಮಾನ ಕಂಪೆನಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಧಿಕಾರಿಗಳಿಂದ ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಎಮಿರೇಟ್ಸ್ ಸಿವಿಲ್ ಎವಿಯೇಶನ್ ಅಥಾರಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
Next Story