ಬಿಡುಗಡೆಗಾಗಿ ಸರಕಾರದೊಂದಿಗೆ ಒಪ್ಪಂದ: ಸೌದಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್
ದುಬೈ, ಮಾ. 20: ತನ್ನ ಬಿಡುಗಡೆಗಾಗಿ ಸರಕಾರದೊಂದಿಗೆ ಒಪ್ಪಂದವೊಂದಕ್ಕೆ ಬಂದಿದ್ದೇನೆ ಎಂದು ಸೌದಿ ಅರೇಬಿಯದ ರಾಜಕುಮಾರ ಹಾಗೂ ‘ಕಿಂಗ್ಡಂ ಹೋಲ್ಡಿಂಗ್’ನ ಅಧ್ಯಕ್ಷ ಅಲ್ವಲೀದ್ ಬಿನ್ ತಲಾಲ್ ಹೇಳಿದ್ದಾರೆ.
ಅವರು ಬ್ಲೂಮ್ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಿದ್ದಾರೆ.
ಸೌದಿ ಅರೇಬಿಯದ ಭ್ರಷ್ಟಾಚಾರ ನಿಗ್ರಹ ಅಭಿಯಾನದ ವೇಳೆ ಬಂಧಿಸಲ್ಪಟ್ಟಿದ್ದ ಅಲ್ವಲೀದ್ ಸುಮಾರು 3 ತಿಂಗಳ ಕಾಲ ಜೈಲಿನಲ್ಲಿದ್ದರು.
ಆದಾಗ್ಯೂ, ಅಧಿಕಾರಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ರಿಯಾದ್ನ ರಿಟ್ಸ್-ಕಾರ್ಲ್ಟನ್ ಹೊಟೇಲ್ನಲ್ಲಿ ಬಂಧನದಲ್ಲಿದ್ದ ರಾಜಕುಮಾರ ಅಲ್ವಲೀದ್ರನ್ನು ಜನವರಿ 27ರಂದು ಬಿಡುಗಡೆ ಮಾಡಲಾಗಿತ್ತು.
ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ಆದೇಶದಂತೆ ನಡೆಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯ ವೇಳೆ ಹಲವಾರು ರಾಜಕುಮಾರರು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳನ್ನು ಬಂಧಿಸಲಾಗಿತ್ತು.
Next Story