ಶರತ್ತು ಈಡೇರಿಸಿದರೆ ಮಾತ್ರ ಮಾಮೂಲಿ ಸಂಬಂಧ: ಕತರ್ಗೆ 4 ಅರಬ್ ದೇಶಗಳ ತಾಕೀತು
ರಿಯಾದ್, ಎ. 13: ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ವಿಧಿಸಿರುವ ಶರತ್ತುಗಳನ್ನು ಕತರ್ ಈಡೇರಿಸಿದರೆ ಮಾತ್ರ ಅದರೊಂದಿಗಿನ ಸಂಬಂಧ ಸಹಜ ಸ್ಥಿತಿಗೆ ಮರಳಬಹುದು ಎಂಬುದಾಗಿ ಈ 4 ದೇಶಗಳು ಗುರುವಾರ ಸ್ಪಷ್ಟಪಡಿಸಿವೆ.
ಸೌದಿ ಅರೇಬಿಯದ ರಾಜಧಾನಿ ರಿಯಾದ್ನಲ್ಲಿ ನಡೆದ 29ನೆ ಅರಬ್ ಲೀಗ್ ಶೃಂಗಸಮ್ಮೇಳನದಲ್ಲಿ ಕತರ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ ಈ ನಾಲ್ಕು ಅರಬ್ ದೇಶಗಳ ವಿದೇಶ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಈ ವಲಯವು ಎದುರಿಸುತ್ತಿರುವ ವಿವಿಧ ರಾಜಕೀಯ, ಭದ್ರತಾ ಮತ್ತು ಸೇನಾ ಬೆಳವಣಿಗೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ವಿದೇಶ ಸಚಿವರು ಇಲ್ಲಿ ಸೇರಿದ್ದಾರೆ.
Next Story