ಮೇ 4 :ದಾರುನ್ನೂರ್ ಕಾಶಿಪಟ್ನ ರಿಯಾದ್ ಸಮಿತಿಯ ವಾರ್ಷಿಕ ಸಭೆ
ರಿಯಾದ್, ಮೇ 2: ಕರ್ನಾಟಕದ ಪ್ರತಿಷ್ಠಿತ ಸಮನ್ವಯ ಇಸ್ಲಾಮಿಕ್ ವಿದ್ಯಾಸಂಸ್ಥೆಯಾದ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ರಿಯಾದ್ ಸೌದಿ ಅರೇಬಿಯಾ ಸಮಿತಿಯ ವಾರ್ಷಿಕ ಮಹಾಸಭೆ ಮೇ 4 ರಂದು ರಾತ್ರಿ 8 ಘಂಟೆಗೆ ರಿಯಾದಿನ ಬಥದಲ್ಲಿರುವ ಹೋಟೆಲ್ ಝಮ್ ಝಮ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಸಭೆಯಲ್ಲಿ ಜಾಮಿಯಾ ನೂರಿಯ ಅರೇಬಿಕ್ ಕಾಲೇಜ್ ಪಟ್ಟಿಕ್ಕಾಡ್ ನ ಪ್ರೊಫೆಸರ್ ಲಿಯಾವುದ್ದೀನ್ ಫೈಜಿ, ಕುಂತೂರು ಜುಮ್ಮಾಮಸೀದಿಯ ಖತೀಬರಾದ ಯುವ ವಾಗ್ಮಿ ಅಬ್ದುಲ್ ರಶೀದ್ ರಹ್ಮಾನಿ ಮತ್ತು ಅನೇಕ ಉಲೇಮಾ, ಉಮರಗಳು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
Next Story