ಸೌದಿಯಲ್ಲಿ ವಿದ್ಯುತ್ ದರ ಹೆಚ್ಚಳ: ಜನರ ಅತೃಪ್ತಿ
ರಿಯಾದ್ (ಸೌದಿ ಅರೇಬಿಯ), ಜೂ. 29: ಸೌದಿ ಅರೇಬಿಯದಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಲಾಗಿದ್ದು ಜನರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಅಸಮಾಧಾನ ಹೊಂದಿರುವ ಗ್ರಾಹಕರು ತನ್ನ ವೆಬ್ಸೈಟ್, ಟೆಲಿಫೋನ್ ನಂಬರ್ ಅಥವಾ ಟ್ವಿಟರ್ ಖಾತೆಯ ಮೂಲಕ ತನ್ನನ್ನು ಸಂಪರ್ಕಿಸಬಹುದಾಗಿದೆ ಎಂದು ಸೌದಿ ವಿದ್ಯುತ್ ಪೂರೈಕೆ ಕಂಪೆನಿ ಹೇಳಿದೆ.
ತನ್ನ 90 ಲಕ್ಷ ಗ್ರಾಹಕರಿಗೆ ಪ್ರತಿ ತಿಂಗಳ 28ನೇ ದಿನಾಂಕದಂದು ಬಿಲ್ಗಳನ್ನು ನೀಡುವುದನ್ನು ಇತ್ತೀಚೆಗೆ ಕಂಪೆನಿ ಆರಂಭಿಸಿದೆ.
ಸೌದಿ ಅರೇಬಿಯದಲ್ಲಿ 70 ಶೇಕಡ ವಿದ್ಯುತ್ತನ್ನು ಹವಾನಿಯಂತ್ರಣ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ.
Next Story