ಯುಎಇ: 5 ದಿನಗಳ ಈದುಲ್ ಅಝ್ ಹಾ ರಜೆ
ದುಬೈ, ಆ. 16: ಯುಎಇಯ ಕೆಲವು ಕಂಪೆನಿಗಳು ಮುಂದಿನ ವಾರದ ಈದುಲ್ ಅಝ್ ಹಾ ರಜೆಯನ್ನು ಸೋಮವಾರದಿಂದ ಗುರುವಾರದವರೆಗೆ ನಿಗದಿಪಡಿಸಿವೆ. ಈ ಮೂಲಕ ಉದ್ಯೋಗಿಗಳು ನಿರಂತರ 5 ದಿನಗಳ ರಜೆಯನ್ನು ಪಡೆದಂತಾಗುತ್ತದೆ.
ಯುಎಇಯ ಬ್ಯಾಂಕ್ಗಳಿಗೂ ಗುರುವಾರ ರಜೆ ನೀಡಲಾಗಿದೆ.
ಶುಕ್ರವಾರ ವಾರದ ರಜೆಯಾಗಿರುವುದರಿಂದ ಉದ್ಯೋಗಿಗಳು 5 ದಿನಗಳ ರಜೆಯನ್ನು ಪಡೆದಂತಾಗುತ್ತದೆ. ಕೆಲಸ ಶನಿವಾರ ಪುನಾರಂಭಗೊಳ್ಳುತ್ತದೆ.
ತನ್ನ ಪ್ರಮುಖ ಶಾಖೆಗಳು ಈದ್ಗಾಗಿ ಆಗಸ್ಟ್ 20ರಿಂದ 23ರವರೆಗೆ ಮುಚ್ಚಿರುವುದು ಎಂಬುದಾಗಿ ಸೆಂಟ್ರಲ್ ಬ್ಯಾಂಕ್ ಘೋಷಿಸಿದೆ. ಬ್ಯಾಂಕ್ಗಳು ವ್ಯವಹಾರಕ್ಕಾಗಿ ಆಗಸ್ಟ್ 25ರಂದು ಶನಿವಾರ ಪುನರ್ಆರಂಭಗೊಳ್ಳುವುದು.
Next Story