ಪ್ರಯಾಣಿಕ ನಿರ್ವಹಣೆ: ದುಬೈ ವಿಮಾನ ನಿಲ್ದಾಣದ ನೂತನ ದಾಖಲೆ
ದುಬೈ, ಅ. 3: ಜಗತ್ತಿನ ನಂಬರ್ 1 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ದುಬೈ ಇಂಟರ್ನ್ಯಾಶನಲ್ ಮೂಲಕ ಆಗಸ್ಟ್ ತಿಂಗಳಲ್ಲಿ 83.7 ಲಕ್ಷ ಪ್ರಯಾಣಿಕರು ಹಾದು ಹೋಗಿದ್ದು, ನೂತನ ಜಾಗತಿಕ ದಾಖಲೆಯಾಗಿದೆ.
ಈ ಮೂಲಕ ಈ ವಿಮಾನ ನಿಲ್ದಾಣವು 2017ರ ಆಗಸ್ಟ್ನಲ್ಲಿ ನಿರ್ಮಿಸಿದ್ದ 82.3 ಲಕ್ಷ ಪ್ರಯಾಣಿಕರ ಅದರದ್ದೇ ದಾಖಲೆಯನ್ನು ಮುರಿದಿದೆ.
ಈ ವರ್ಷ ಈ ವಿಮಾನ ನಿಲ್ದಾಣದ ಮೂಲಕ ಹಾದುಹೋದ ಸರಾಸರಿ ಮಾಸಿಕ ಪ್ರಯಾಣಿಕರ ಸಂಖ್ಯೆ 75 ಲಕ್ಷ. ಇದು ಅದರ ನಿಕಟ ಪ್ರತಿಸ್ಪರ್ಧಿ ಲಂಡನ್ನ ಹೀತ್ರೂ ವಿಮಾನ ನಿಲ್ದಾಣಕ್ಕಿಂತ 12 ಲಕ್ಷ ಹೆಚ್ಚು. ಹೀತ್ರೂ ವಿಮಾನ ನಿಲ್ದಾಣದ ಮೂಲಕ ಹಾದುಹೋದ ಸರಾಸರಿ ಮಾಸಿಕ ಪ್ರಯಾಣಿಕರ ಸಂಖ್ಯೆ 62.9 ಲಕ್ಷ.
Next Story