ಅ. 18: ದುಬೈಯಲ್ಲಿ 'ಬ್ಯಾರೀಸ್ ಲೀಗ್-2018'
ಸಫ್ವಾನ್
ದುಬೈ, ಅ. 14: ಬಿಐಟಿಯ ಅಂತರ್ ರಾಷ್ಟ್ರೀಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಗಿಸಲ್ಪಡುವ "ಬ್ಯಾರೀಸ್ ಲೀಗ್-2018" ಪಂದ್ಯಾಟ ಅ. 18ರಂದು ದುಬೈಯ ಅಲ್-ಅದಾಫ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾವಳಿಯ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಬಿಐಟಿಯ ದೈಹಿಕ ನಿರ್ದೇಶಕ ಸಫ್ವಾನ್ ಕೆ. ಅವರು ಆಯ್ಕೆಯಾಗಿದ್ದು, ಅ. 17ರಂದು ದುಬೈಗೆ ತೆರಳಿದ್ದಾರೆ.
ಪಂದ್ಯಾಟವು ಸುಮಾರು ಒಂದು ವಾರಗಳ ಕಾಲ ನಡೆಯಲಿದ್ದು, ಬಿಐಟಿಯ ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story