ದಮ್ಮಾಮ್: ನ.1ರಂದು ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ವತಿಯಿಂದ 'ಚಮ್ಮನ 2018' ಕಾರ್ಯಕ್ರಮ
ದಮ್ಮಾಮ್, ಅ. 29: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ಪೂರ್ವ ವಲಯ ವತಿಯಿಂದ ನ.1ರಂದು ದಮ್ಮಾಮ್ ನ 91 ಅಲ್ ಝಾನ ಇಸ್ತಿರಾಹ್ ನಲ್ಲಿ 'ಚಮ್ಮನ 2018' ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪುರುಷರಿಗೆ ಆಟೋಟ ಸ್ಪರ್ಧೆಗಳು, ಮಹಿಳೆಯರಿಗೆ ಒಳಾಂಗಣ ಸ್ಪರ್ಧೆಗಳು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಕಾರ್ಯ ಕ್ರಮ ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಮತ್ತು ವಿಜೇತರಿಗೆ ಅರ್ಹ ಬಹುಮಾನಗಳನ್ನು ನೀಡಲಾಗುತ್ತದೆ.
ಪಣಂಬೂರ್ ಮುಸ್ಲಿಂ ಜಮಾತ್ ಕಾಟಿಪಳ್ಳ ಇದರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ಆರ್ಥಿಕವಾಗಿ ಹಿಂದುಳಿದ ಯುವತಿಯರ ಮದುವೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಸಮುದಾಯದ ಅಶಕ್ತರಿಗೆ ವೈದ್ಯಕೀಯ ನೆರವು ಹಾಗು ಇತರ ಸೇವೆಗಳನ್ನು ಕಳೆದ 29 ವರ್ಷಗಳಿಂದ ಗಲ್ಫ್ ಸದಸ್ಯರ ಸಹಕಾರದಿಂದ ನೀಡುತ್ತಾ ಬಂದಿದ್ದು, ಇದೀಗ 30ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಪ್ರಯುಕ್ತ 'ಚಮ್ಮನ -2018' ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿರುವುದಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.