ದೀಪಾವಳಿ ಶುಭಾಶಯ ಕೋರಿದ ದುಬೈ ಆಡಳಿತಗಾರ
ದುಬೈ, ನ. 7: ಯುಎಇಯ ಉಪಾಧ್ಯಕ್ಷ ಮತ್ತು ಪ್ರಧಾನಿ ಹಾಗೂ ದುಬೈ ಆಡಳಿತಗಾರ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ಮತ್ತು ಜಗತ್ತಿನಾದ್ಯಂತ ದೀಪಾವಳಿ ಆಚರಿಸುವ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.
‘‘ಯುಎಇ ಜನತೆಯ ಪರವಾಗಿ, ನರೇಂದ್ರ ಮೋದಿ, ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ನಾನು ಶುಭಾಶಯ ಕೋರುತ್ತೇನೆ. ಪ್ರೀತಿ ಮತ್ತು ಭರವಸೆಯ ದೀಪ ನಮ್ಮೆಲ್ಲರನ್ನೂ ಬೆಳಗಿಸಲಿ’’ ಎಂದು ಅವರು ಬುಧವಾರ ಟ್ವೀಟ್ ಮಾಡಿದ್ದಾರೆ.
ಹಿಂದಿಯಲ್ಲೂ ಟ್ವೀಟ್ ಮಾಡಿರುವ ಅವರು, ಯುಎಇಯಲ್ಲಿ ನಡೆಯುವ ದೀಪಾವಳಿ ಆಚರಣೆಯ ಚಿತ್ರಗಳನ್ನು ಹಂಚಿಕೊಳ್ಳುವಂತೆ ಯುಎಇ ನಿವಾಸಿಗಳಿಗೆ ಆಹ್ವಾನ ನೀಡಿದ್ದಾರೆ.
Next Story