ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಬಿಸಿಸಿಐ ನಿಯೋಗದ ಸದಸ್ಯರಿಗೆ ಸನ್ಮಾನ
ದುಬೈ, ನ. 12: ಇತ್ತೀಚಿಗೆ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಯುಎಇ ಚಾಪ್ಟರ್ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕದ ಹಲವಾರು ಗಣ್ಯ ವ್ಯಕ್ತಿಗಳ ಗೌರವಾರ್ಥ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಅಧ್ಯಕ್ಷರಾದ ಡಾ. ಬಿಕೆ ಯೂಸುಫ್ ಅವರ ಜುಮೇರಾ ಐಲ್ಯಾಂಡ್ ನಲ್ಲಿರುವ ವಿಲ್ಲಾದಲ್ಲಿ ಸನ್ಮಾನ ಕೂಟ ಏರ್ಪಡಿಸಲಾಯಿತು.
ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಮಂಗಳೂರು ಇದರ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಬಿಸಿಸಿಐ ಉಪಾಧ್ಯಕ್ಷರೂ, ಬಿಸಿಎಫ್ ಪೋಷಕರೂ ಆದ ಮುಮ್ತಾಝ್ ಅಲಿ, ಬಿಸಿಸಿಐ ಇದರ ಪದಾಧಿಕಾರಿಗಳಾದ ಡಾ. ಯು.ಟಿ. ಇಫ್ತಿಕಾರ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, , ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮುಹಮದ್ ಹಾರಿಸ್, ಲಕ್ಕೀ ಸ್ಟಾರ್ ನಿರ್ದೇಶಕ ನಾಸರ್, ಕೆನರಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ನಿಸಾರ್ ಮುಹಮ್ಮದ್, ಡೆಕ್ಕನ್ ಪ್ಲಾಸ್ಟ್ ನಿರ್ದೇಶಕ ಬಿ ಎಚ್ ಅಸ್ಗರ್ ಅಲಿ, ಅಝಾದ್ ಗ್ರೂಪ್ ನಿರ್ದೇಶಕ ಮನ್ಸೂರ್ ಅಹ್ಮದ್, ನೌಶಾದ್ ಸೂರಲ್ಪಾಡಿ, ರಿಯಾಝ್ ಬಾವಾ, ಅಬ್ದುಲ್ ರಝಾಕ್ ಹೆಜ್ಮಾಡಿ, ಅಸದ್ ಹಕ್, ಮುಹಮ್ಮದ್ ಮನ್ಸೂರ್, ಮುಹಮ್ಮದ್ ಮುಸ್ತಾಕ್, ಡಾ. ಬಿಕೆ ಸಮೀರ್ ಯೂಸುಫ್, ಅಶ್ರಫ್ ಕೆಎಂ, ನಾಬ್ ಅಬೂಸಾಲಿಹ್, ಝಯಿನುದ್ದೀನ್ ಬೆಳ್ಳಾರೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್, ಉಪಾಧ್ಯಕ್ಷ ಎಂ ಇ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೈನ್ ಹಾಗೂ ಪದಾಧಿಕಾರಿಗಳಾದ ಉಸ್ಮಾನ್ ಮೂಳೂರು, ಅಬ್ದುಲ್ ರಹ್ಮಾನ್ ಸಜಿಪ, ಸ್ಯಾಂಡ್ ಬೀರಾಲಿ, ನವಾಝ್ ಕೋಟೆಕಾರ್, ಅಸ್ಲಮ್ ಕಾರಾಜೆ ಮೊದಲಾದವರು ಉಪಸ್ಥಿತರಿದ್ದರು.
ಡಾ. ಕಾಪು ಮುಹಮದ್ ಸ್ವಾಗತಿಸಿದರು. ಡಾ. ಬಿಕೆ ಯೂಸುಫ್ ಪ್ರಾಸ್ತಾವಿಕವಾಗಿ ಮಾತಾಡಿದರು. ಎಂಇ ಮೂಳೂರು ಬಿಸಿಎಫ್ ಇದರ ಪರಿಚಯ ಮಾಡಿದರು. ಎಸ್ ಎಂ ರಶೀದ್ ಹಾಜಿ, ಇಮ್ತಿಯಾಝ್, ಮನ್ಸೂರ್ ಬಹರೈನ್, ಡಾ. ಬಿಕೆ ಸಮೀರ್ ಯೂಸುಫ್ ಮೊದಲಾದವರು ಮಾತನಾಡಿದರು.
ಈ ಸಂದರ್ಭ ಎಸ್ ಎಂ ರಶೀದ್ ಹಾಜಿ ಹಾಗೂ ಮನ್ಸೂರ್ ಬಹರೈನ್ ಅವರನ್ನು ಬಿಸಿಎಫ್ ಸನ್ಮಾನಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿತು. ಅಫೀಕ್ ಹುಸೈನ್ ವಂದಿಸಿದರು.