ದುಬೈ: ಸ್ಮಾರ್ಟ್ ಸಾರಿಗೆ ವ್ಯವಸ್ಥೆ ವಿಸ್ತರಣೆಗೆ ಯೋಜನೆ
ದುಬೈ, ನ. 19: ದುಬೈಯ ಸ್ಮಾರ್ಟ್ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು 59 ಕೋಟಿ ದಿರ್ಹಮ್ ವೆಚ್ಚದ ಯೋಜನೆಯೊಂದನ್ನು ದುಬೈಯ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ ಘೋಷಿಸಿದೆ.
ಎಮಿರೇಟ್ನಲ್ಲಿ ಸ್ಮಾರ್ಟ್ ಸಾರಿಗೆ ವ್ಯವಸ್ಥೆಗಳ ಮೂಲಸೌಕರ್ಯ ಒದಗಿಸಲು ಹಾಗೂ ನೂತನ ಸಾರಿಗೆ ನಿರ್ವಹಣೆ ವ್ಯವಸ್ಥೆಯನ್ನು ನಿರ್ಮಿಸಲು ಹಾಗೂ ಆ ಮೂಲಕ ದುಬೈಯ ಸ್ಮಾರ್ಟ್ ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರದ ಮಹಾನಿರ್ದೇಶಕ ಮತ್ತಾರ್ ಅಲ್ ತಾಯಿರ್ ಹೇಳಿದರು.
Next Story