ಜಮಾಲ್ ಖಶೋಗಿ ಹತ್ಯೆ: ಸೌದಿ ಯುವರಾಜನ ಮಿತ್ರನ ಮನೆ ಶೋಧಿಸಿದ ಟರ್ಕಿ ಪೊಲೀಸರು
ಅಂಕಾರ, ನ. 27: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೋಮವಾರ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ಮಿತ್ರರೊಬ್ಬರಿಗೆ ಸೇರಿದ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಶ್ವಾನ ದಳ ಮತ್ತು ಡ್ರೋನ್ಗಳನ್ನು ಬಳಸಿಕೊಂಡ ತನಿಖಾಧಿಕಾರಿಗಳು ವಾಯುವ್ಯ ಟರ್ಕಿಯ ಯಲೋವ ರಾಜ್ಯದಲ್ಲಿರುವ ಸೌದಿ ಉದ್ಯಮಿಯ ನಿವಾಸ ಮತ್ತು ಸುತ್ತಲಿನ ತೋಟದಲ್ಲಿ 10 ಗಂಟೆಗಳ ಕಾಲ ಶೋಧ ನಡೆಸಿದರು ಎಂದು ‘ಹುರಿಯತ್’ ದೈನಿಕ ಮಂಗಳವಾರ ವರದಿ ಮಾಡಿದೆ.
ತೋಟದಲ್ಲಿರುವ ಮೂರು ಬಾವಿಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ಮನೆ ಮತ್ತು ತೋಟವು ಮುಹಮ್ಮದ್ ಅಹ್ಮದ್ ಅಲ್-ಫಾವ್ಝನ್ಗೆ ಸೇರಿದೆ.
Next Story