ಆರೋಪಿಗಳನ್ನು ಟರ್ಕಿಗೆ ಹಸ್ತಾಂತರಿಸುವುದಿಲ್ಲ: ಸೌದಿ
ಜಮಾಲ್ ಖಶೋಗಿ ಹತ್ಯೆ ಪ್ರಕರಣ
ರಿಯಾದ್, ಡಿ. 10: ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಲ್ಲಿ ಕೊಲೆಗೀಡಾಗಿರುವ ಸೌದಿ ಪ್ರಭುತ್ವದ ಟೀಕಾಕಾರ ಜಮಾಲ್ ಖಶೋಗಿ ಹತ್ಯೆಯ ಆರೋಪಿಗಳನ್ನು ಟರ್ಕಿಗೆ ಹಸ್ತಾಂತರಿಸಬೇಕು ಎಂಬ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ರ ಬೇಡಿಕೆಯನ್ನು ಸೌದಿ ಅರೇಬಿಯದ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ರವಿವಾರ ತಿರಸ್ಕರಿಸಿದ್ದಾರೆ.
‘‘ನಾವು ನಮ್ಮ ನಾಗರಿಕರನ್ನು ಗಡಿಪಾರು ಮಾಡುವುದಿಲ್ಲ’’ ಎಂದು ಕೊಲ್ಲಿ ಸಹಕಾರ ಮಂಡಳಿಯ ದೇಶಗಳ ಶೃಂಗ ಸಮ್ಮೇಳನದ ಕೊನೆಯಲ್ಲಿ ರಿಯಾದ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
Next Story