ಯುಎಇ: ಕೆಸಿಎಫ್ ಪ್ರತಿಭೋತ್ಸವ ಲೋಗೋ ಬಿಡುಗಡೆ
ದುಬೈ, ಡಿ. 27: ಯುಎಇ ಕೆಸಿಎಫ್ ಪ್ರತಿಭೋತ್ಸವ ಲೋಗೋ ಅನ್ನು ಎನ್.ಎಂ.ಸಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಬಿ.ಆರ್. ಶೆಟ್ಟಿ ಬಿಡುಗಡೆಗೊಳಿಸಿದರು.
ಕೆಸಿಎಫ್ ಯುಎಇ ನ್ಯಾಷನಲ್ ಸಮಿತಿಯಿಂದ ಆಯೋಜಿಸಿದ ಪ್ರತಿಭೋತ್ಸವ ಯುನಿಕ್ ಲೋಗೋ ಕಂಟೆಸ್ಟ್-2019 ಸ್ಪರ್ಧೆಯಲ್ಲಿ ಅಶ್ರಫ್ ಕುಕ್ಕಾಜೆ ವಿನ್ಯಾಸಗೊಳಿಸಿದ ಲೋಗೋವನ್ನು ರಾಷ್ಟ್ರೀಯ ಸಮಿತಿ ಆಯ್ಕೆ ಮಾಡಿ ಪ್ರತಿಭೋತ್ಸವ ಲೋಗೋವಾಗಿ ಬಳಸುವಂತೆ ಸೂಚಿಸಲಾಯಿತು.
ರಾಜ್ಯದಿಂದ ವಿಶೇಷವಾಗಿ ಪರಿಣತಿ ಹೊಂದಿದ ವಿನ್ಯಾಸಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಲೋಗೋ ವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದರು. 50 ಕ್ಕೂ ಹೆಚ್ಚು ವಿನ್ಯಾಸವನ್ನು ಪರಿಶೀಲಿಸಿದ ಕೆಸಿಎಫ್ ರಾಷ್ಟ್ರೀಯ ನಾಯಕರು ಅಶ್ರಫ್ ಕುಕ್ಕಾಜೆ ಅವರು ರಚಿಸಿದ ಲೋಗೋವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು.
ಪ್ರಸ್ತುತ ಲೋಗೋವಿನ ತಳ ಭಾಗ ಮರಳು ಗಾಡಿನಿಂದ ಆವೃತ್ತಗೊಂಡಿದ್ದು, ಪ್ರವಾಸೀ ಜೀವನದ ಆರಂಭವನ್ನು ತಿಳಿಸುತ್ತದೆ. ಮರಳುಗಾಡಿನ ದೇಶೀಯ ಆಹಾರ ಕಾರ್ಜುರದ ಮರವೊಂದು 'K' ಆಕಾರದಲ್ಲಿ ಭಾಗಿ ನಿಂತಿದ್ದು ಅರಬ್ ರಾಷ್ಟ್ರದ ಮರಳುಗಾಡಿನ ಪ್ರಶಾಂತ ವಾತಾವರಣದಲ್ಲಿ ಬೆಳೆದು ಬರುತ್ತಿರುವ ಕಾರ್ಜುರ ಮರದ ಹಾಗೆ ಪ್ರವಾಸಿ ಜೀವನವು ಆರಂಭಗೊಳ್ಳುತ್ತದೆ. ಚಂದ್ರನ ಆಕಾರದಲ್ಲಿ 'C' ಮೂಡಿ ಬಂದಿದ್ದು, ಪ್ರವಾಸಿ ಜೀವನದ ಬೆಳಕಾಗಿ ಕೆಸಿಎಫ್ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ. ಗಿಡ ಮತ್ತು ಎಲೆಗಳ ರೂಪದಲ್ಲಿ 'F' ಮೂಡಿ ಬಂದಿದ್ದು . ಇದರ ಮಧ್ಯೆ ಪೆನ್ಸಿಲ್ ಆಕಾರದಲ್ಲಿ ಒಂದು ಎಲೆಯು ಪ್ರತಿಭೆಗಳನ್ನು ಹೋಲುವ ರೀತಿಯಲ್ಲಿದೆ. ಇದರ ಮೇಲ್ತುದಿಯಲ್ಲಿ ಬಣ್ಣ ಬಣ್ಣದ ಬಿಂದುಗಳು ಸೌಂದರ್ಯವನ್ನು ನೀಡಿದ್ದು ಕೆ.ಸಿ.ಎಫ್ ಮೂಲಕ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದು ಸುಂದರವಾದ ಪ್ರವಾಸಿ ಜೀವನವನ್ನು ಆಸ್ವಾದಿಸಬಹುದು ಎಂಬ ಸಂದೇಶವನ್ನು ಲೋಗೋ ಸಾರುತ್ತದೆ.
ವಿನ್ಯಾಸ ಕಳುಹಿಸಿಕೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿನ್ಯಾಸಗಾರರಿಗೂ ಯುಎಇ ಕೆಸಿಎಫ್ ಅಭಾರಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಅಶ್ರಫ್ ಕುಕ್ಕಾಜೆ