ದಾರುನ್ನೂರ್ ಯುಎಇ ನ್ಯಾಷನಲ್ ಸಮಿತಿಯ ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ ಆಯ್ರೆ
ದುಬೈ, ಜ. 5: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ಯುಎಇ ನ್ಯಾಷನಲ್ ಸಮಿತಿಯ ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ ಆಯ್ಕೆಯಾಗಿದ್ದಾರೆ.
ದಾರುನ್ನೂರ್ ಎಜುಕೇಷನಲ್ ಸಂಟರ್ ಇದರ ಶಾರ್ಜಾ ಸ್ಟೇಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಸಂಶುದ್ದೀನ್ ಸೂರಲ್ಪಾಡಿಯವರು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ದುಬೈಯಲ್ಲಿ ನಡೆದ ದಾರುನ್ನೂರ್ ಯುಎಇ ನ್ಯಾಷನಲ್ ಸಮಿತಿಯ ಮಹಾಸಭೆಯಲ್ಲಿ ದಾರುನ್ನೂರ್ ಸಲಹೆಗಾರರಾದ ಅಸ್ಗರ್ ಅಲಿ ತಂಞಲ್, ಮೊಯ್ದಿನ್ ಕುಟ್ಟಿ ಹಾಜಿ ದಿಬ್ಬ, ಸಂಶುದ್ದೀನ್ ಕಲ್ಕಾರ್ ಹಾಗೂ ಅಡ್ವೊಕೇಟ್ ಇಬ್ರಾಹಿಂ ಖಲೀಲ್ ಇವರ ಉಪಸ್ಥಿತಿಯಲ್ಲಿ ನಿರ್ಗಮನ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧಿಕಾರ ಹಸ್ತಾಂತರಿಸಿದರು.
ಈ ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಹೇಂತಾರ್ ಹಾಗೂ ಖಜಾಂಜಿಯಾಗಿ ಅಬ್ದುಲ್ ಸಲಾಂ ಬಪ್ಪಳಿಗೆ ಆಯ್ಕೆಯಾಗಿದ್ದಾರೆ.
Next Story