ಅಜ್ಮಾನ್ : ಮುಸ್ಲಿಂ ಜಮಾಅತ್ ಪೋಸ್ಟರ್ ಬಿಡುಗಡೆಗೊಳಿಸಿದ ತುಂಬೆ ಮೊಯಿದಿನ್
ಅಜ್ಮಾನ್, ಜ. 13: ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಹಳೆ ಹಜ್ ಕ್ಯಾಂಪ್ ಮೈದಾನದಲ್ಲಿ ಜ. 27ರಂದು ನೂತನವಾಗಿ ರೂಪುಗೊಳ್ಳುವ ಕರ್ನಾಟಕ ಮುಸ್ಲಿಂ ಜಮಾಅತ್ ನ ಪೋಸ್ಟರನ್ನು ಪ್ರಮುಖ ಅಂತರ್ ರಾಷ್ಟ್ರೀಯ ಉದ್ಯಮಿ, ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಗಲ್ಫ್ ಮೆಡಿಕಲ್ ಕಾಲೇಜಿನ ಸಾರಥಿ ತುಂಬೆ ಮೊಯಿದಿನ್ ಹಾಜಿ ಅಜ್ಮಾನ್ ನಲ್ಲಿ ಬಿಡುಗಡೆಗೊಳಿಸಿದರು.
ಮುಸ್ಲಿಂ ಜಮಾಅತ್ ರಾಜ್ಯ ಕೋ ಅರ್ಡಿನೇಟರ್, ಮಾಜಿ ರಾಜ್ಯ ವಕ್ಫ್ ಸದಸ್ಯ ಮೌಲಾನಾ ಶಾಫಿ ಸಅದಿ ಬೆಂಗಳೂರು, ಅನಿವಾಸಿ ಉದ್ಯಮಿಗಳಾದ ಬಿಲಾಲುದ್ದೀನ್, ಮುಹಮ್ಮದ್ ಶಬೀರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story