ಸೌದಿ: ಈವರೆಗೆ 32.70 ಲಕ್ಷ ಉಮ್ರಾ ವೀಸಾ
ಜಿದ್ದಾ, ಜ. 27: ಈ ವರ್ಷ 32,70,164 ಉಮ್ರಾ ವೀಸಾಗಳನ್ನು ನೀಡಲಾಗಿದೆ ಹಾಗೂ ಆ ಪೈಕಿ 27,91,438 ಯಾತ್ರಿಕರು ಈಗಾಗಲೇ ಸೌದಿ ಅರೇಬಿಯಕ್ಕೆ ಬಂದಿದ್ದಾರೆ ಎಂದು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಸೌದಿ ಅರೇಬಿಯದಲ್ಲಿ ಈಗಲೂ 4,49,770 ಯಾತ್ರಿಕರು ಇದ್ದಾರೆ. ಅವರ ಪೈಕಿ 3,21,006 ಮಂದಿ ಮಕ್ಕಾದಲ್ಲಿದ್ದರೆ, 1,28,764 ಮಂದಿ ಮದೀನಾದಲ್ಲಿದ್ದಾರೆ.
ಹೆಚ್ಚಿನ ಯಾತ್ರಿಕರು- 24,78,416- ವಿಮಾನದ ಮೂಲಕ ಬಂದರೆ, 2,94,572 ಮಂದಿ ಭೂಗಡಿ ದಾಟಿಕೊಂಡು ಬಂದಿದ್ದಾರೆ. 18,450 ಯಾತ್ರಿಕರು ಹಡಗಿನಲ್ಲಿ ಆಗಮಿಸಿದ್ದಾರೆ.
Next Story