ಸೌದಿ ಯುವರಾಜನ ಪಾಕ್ ಪ್ರವಾಸ ಒಂದು ದಿನ ವಿಳಂಬ
ಇಸ್ಲಾಮಾಬಾದ್, ಫೆ. 16: ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರ ಪಾಕಿಸ್ತಾನ ಪ್ರವಾಸ ಒಂದು ದಿನ ಮುಂದೂಡಲ್ಪಟ್ಟಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ.
ಸೌದಿ ಯುವರಾಜ ಪಾಕಿಸ್ತಾನಕ್ಕೆ ಎರಡು ದಿನಗಳ ಭೇಟಿಗಾಗಿ ಇಸ್ಲಾಮಾಬಾದ್ ಗೆ ಶನಿವಾರ ಆಗಮಿಸಬೇಕಾಗಿತ್ತು.
ಈಗ, ಅವರ ಪ್ರವಾಸವನ್ನು ಪುನರ್ ರೂಪಿಸಲಾಗಿದೆ ಹಾಗೂ ಅವರು ರವಿವಾರ ಇಸ್ಲಾಮಾಬಾದ್ಗೆ ಆಗಮಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ತಿಳಿಸಿದೆ.
ಆದರೆ, ವಿಳಂಬಕ್ಕೆ ಅದು ಯಾವುದೇ ಕಾರಣವನ್ನು ನೀಡಿಲ್ಲ.
‘‘ಸೌದಿ ಯುವರಾಜ ಫೆಬ್ರವರಿ 17 ಮತ್ತು 18ರಂದು ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ ಹಾಗೂ ಅವರ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಯಿಲ್ಲ’’ ಎಂದು ಅದು ಹೇಳಿದೆ.
Next Story