ಮೋದಿ, ಇಮ್ರಾನ್ಗೆ ಅಬುಧಾಬಿ ಯುವರಾಜರಿಂದ ಫೋನ್ ಕರೆ
ಅಬುಧಾಬಿ, ಮಾ. 1: ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಗುರುವಾರ ಫೋನ್ ಕರೆ ಮಾಡಿರುವ ಅಬುಧಾಬಿ ಯುವರಾಜ ಮುಹಮ್ಮದ್ ಬಿನ್ ಝಾಯೇದ್ ಅಲ್-ನಹ್ಯಾನ್, ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮಾತುಕತೆ ಮತ್ತು ಸಂವಹನದಲ್ಲಿ ತೊಡಗುವಂತೆ ಕರೆ ನೀಡಿದ್ದಾರೆ.
ನಾನು ಮೋದಿ ಮತ್ತು ಖಾನ್ ಜೊತೆ ಮಾತನಾಡಿದೆ ಹಾಗೂ ಇತ್ತೀಚಿನ ಬೆಳವಣಿಗೆಗಳೊಂದಿಗೆ ಜಾಣತನದಿಂದ ವ್ಯವಹರಿಸುವ ಹಾಗೂ ಮಾತುಕತೆ ಮತ್ತು ಸಂವಹನಕ್ಕೆ ಆದ್ಯತೆ ನೀಡುವ ಅಗತ್ಯದ ಬಗ್ಗೆ ಮಾತನಾಡಿದೆ ಎಂದು ಟ್ವೀಟ್ ನಲ್ಲಿ ಯುವರಾಜ ಹೇಳಿದ್ದಾರೆ.
ಯುವರಾಜ ಯುಎಇ ಸಶಸ್ತ್ರ ಪಡೆಗಳ ಉಪ ಮುಖ್ಯ ಕಮಾಂಡರ್ ಕೂಡ ಆಗಿದ್ದಾರೆ.
ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆಗೆ ಒಂದು ದಿನ ಮುನ್ನ ಅವರು ಟ್ವೀಟ್ ಮಾಡಿದ್ದಾರೆ.
ಇಸ್ಲಾಮಿಕ್ ಸಹಕಾರ ಸಂಘಟನೆಯ ಪೂರ್ಣ ಸಭೆಗೆ ಭಾರತವನ್ನು ಮೊದಲ ಬಾರಿಗೆ ಆಮಂತ್ರಿಸಿರುವುದನ್ನು ಸ್ಮರಿಸಬಹುದಾಗಿದೆ.
Next Story