ಸೌದಿ: ವಿವಿಧ ಉಲ್ಲಂಘನೆಗಳಿಗಾಗಿ 32.4 ಲಕ್ಷ ಮಂದಿ ಬಂಧನ
ರಿಯಾದ್ (ಸೌದಿ ಅರೇಬಿಯ), ಜೂ. 3: ಸೌದಿ ಅರೇಬಿಯದಲ್ಲಿ ವಾಸ್ತವ್ಯ, ಕೆಲಸ ಮತ್ತು ಗಡಿ ಭದ್ರತೆ ವ್ಯವಸ್ಥೆಗಳನ್ನು ಉಲ್ಲಂಘಿಸಿದ 32.4 ಲಕ್ಷ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ವರದಿಯೊಂದು ತಿಳಿಸಿದೆ.
2017 ನವೆಂಬರ್ನಲ್ಲಿ ಜಂಟಿ ಕ್ಷೇತ್ರ ಭದ್ರತಾ ಅಭಿಯಾನ ಆರಂಭಗೊಂಡಂದಿನಿಂದ 32,45,652 ಮಂದಿ ಉಲ್ಲಂಘಕರನ್ನು ಗುರುತಿಸಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ರವಿವಾರ ವರದಿ ಮಾಡಿದೆ.
ಈ ಪೈಕಿ 25,30,232 ಮಂದಿಯನ್ನು ವಾಸ್ತವ್ಯ ನಿಯಮಗಳ ಉಲ್ಲಂಘನೆಗಾಗಿ ಬಂಧಿಸಲಾದರೆ, 5,00,454 ಮಂದಿಯನ್ನು ಕಾರ್ಮಿಕ ನಿಯಮಗಳ ಉಲ್ಲಂಘನೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಡಿ ನಿಯಮಗಳ ಉಲ್ಲಂಘನೆಗಾಗಿ 2,14,966 ಮಂದಿಯನ್ನು ಬಂಧಿಸಲಾಗಿದೆ.
ಇದೇ ಅವಧಿಯಲ್ಲಿ ಗಡಿ ದಾಟಿ ಸೌದಿ ಅರೇಬಿಯ ಪ್ರವೇಶಿಸಲು ಯತ್ನಿಸಿದ 54,496 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Next Story