ಶಾರ್ಜಾ ಆಡಳಿತಗಾರ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಪುತ್ರ ನಿಧನ
ಶಾರ್ಜಾ, ಜು. 2: ಸುಪ್ರೀಮ್ ಕೌನ್ಸಿಲ್ ಸದಸ್ಯ ಹಾಗೂ ಶಾರ್ಜಾ ಆಡಳಿತಗಾರ ಡಾ. ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯವರ ಪುತ್ರ ಶೇಖ್ ಖಾಲಿದ್ ಬಿನ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಲಂಡನ್ನಲ್ಲಿ ನಿಧನರಾಗಿದ್ದಾರೆ.
ಆಡಳಿತಗಾರನ ಆಸ್ಥಾನವು ಹೇಳಿಕೆಯೊಂದರಲ್ಲಿ, ಶಾರ್ಜಾ ಆಡಳಿತಗಾರ, ಮೃತನ ಕುಟುಂಬ ಹಾಗೂ ಅಲ್ ಖಾಸಿಮಿ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶಾರ್ಜಾದಲ್ಲಿ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಲಾಗಿದೆ.
Next Story