ಮಹಿಳೆಯರು ಇನ್ನು ಸಶಸ್ತ್ರ ಪಡೆಗಳಿಗೆ ಸೇರಬಹುದು: ಸೌದಿ ಘೋಷಣೆ
ರಿಯಾದ್, ಅ. 10: ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಜಾರಿಯಲ್ಲಿರುವ ಸೌದಿ ಅರೇಬಿಯದಲ್ಲಿ ಮಹಿಳೆಯರು ಇನ್ನು ಮುಂದೆ ದೇಶದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಬಹುದು.
ದೇಶದಲ್ಲಿ ಮಹಿಳೆಯರಿಗೆ ಹೆಚ್ಚೆಚ್ಚು ಹಕ್ಕುಗಳನ್ನು ನೀಡುತ್ತಿರುವ ಅವಧಿಯಲ್ಲಿ ಇದು ಆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
‘‘ಮಹಿಳೆಯರ ಸಬಲೀಕರಣದತ್ತ ಇನ್ನೊಂದು ಹೆಜ್ಜೆ’’ ಎಂದು ಸೌದಿ ವಿದೇಶ ಸಚಿವಾಲಯ ಟ್ವಿಟರ್ನಲ್ಲಿ ಬರೆದಿದೆ. ‘‘ಪ್ರೈವೇಟ್ ಫಸ್ಟ್ ಕ್ಲಾಸ್, ಕಾರ್ಪೊರಲ್ ಅಥವಾ ಸಾರ್ಜಂಟ್ ಆಗಿ ಸೇವೆ ಸಲ್ಲಿಸಲು ಮಹಿಳೆಯರು ಸಮರ್ಥರಾಗಿದ್ದಾರೆ’’ ಎಂದು ಅದು ಹೇಳಿದೆ.
Next Story