ಸೌದಿ: ಮೂವರು ನಟರಿಗೆ ಇರಿತ
ರಿಯಾದ್ (ಸೌದಿ ಅರೇಬಿಯ), ನ. 12: ಸೌದಿ ಅರೇಬಿಯದ ರಾಜಧಾನಿ ರಿಯಾದ್ನಲ್ಲಿ ಸೋಮವಾರ ನಾಟಕವೊಂದು ನಡೆಯುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಮೂವರು ನಟರಿಗೆ ಚೂರಿಯಿಂದ ಇರಿದಿದ್ದಾನೆ ಎಂದು ಸರಕಾರಿ ಟೆಲಿವಿಶನ್ ತಿಳಿಸಿದೆ.
ಆರೋಪಿಯನ್ನು ಬಂಧಿಸಲಾಗಿದೆ. ಸೌದಿ ಅರೇಬಿಯವು ಮನರಂಜನೆಗೆ ಬಾಗಿಲನ್ನು ತೆರೆದ ಬಳಿಕ, ಇಂಥ ಘಟನೆ ನಡೆದಿರುವುದು ಮೊದಲ ಬಾರಿಯಾಗಿದೆ.
‘‘ನಾಟಕ ಗುಂಪೊಂದರ ಸದಸ್ಯರಾಗಿರುವ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯನ್ನು ಚೂರಿಯಿಂದ ಇರಿದ ಬಳಿಕ, ಓರ್ವ ಅರಬ್ ಪ್ರಜೆಯನ್ನು ಚೂರಿಯೊಂದಿಗೆ ರಿಯಾದ್ ಪೊಲೀಸರು ಬಂಧಿಸಿದ್ದಾರೆ’’ ಎಂದು ಅಲ್-ಅಕ್ಬರಿಯಾ ಟೆಲಿವಿಶನ್ ವರದಿ ಮಾಡಿದೆ.
ಗಾಯಗೊಂಡವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅದು ಹೇಳಿದೆ.
Next Story