ಜುಲೈ 31ಕ್ಕೆ ಈದುಲ್ ಅಝ್ ಹಾ ಆಚರಣೆ: ಸೌದಿ ಘೋಷಣೆ
ದುಬೈ, ಜು. 20 : ಜುಲೈ 31 ರಂದು ಶುಕ್ರವಾರ ಈದುಲ್ ಅಝ್ ಹಾ (ಬಕ್ರೀದ್) ಆಚರಿಸಲಾಗುವುದು ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಘೋಷಿಸಿದೆ. ಮಂಗಳವಾರ ದುಲ್ ಕಅದ್ 30ನೇ ದಿನವಾಗಿದ್ದು ಬುಧವಾರ ಜುಲೈ 22 ದುಲ್ಹಜ್ ತಿಂಗಳ ಮೊದಲ ದಿನವಾಗಿದೆ. ಆದ್ದರಿಂದ ದುಲ್ಹಜ್ ತಿಂಗಳ 10ನೇ ದಿನ ಅಂದರೆ ಜುಲೈ 31 ರಂದು ಬಕ್ರೀದ್ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸೋಮವಾರ ದುಲ್ಹಜ್ ಚಂದ್ರದರ್ಶನ ಆಗದೇ ಇರುವುದರಿಂದ ಬುಧವಾರ ಜುಲೈ 22 ದುಲ್ಹಜ್ ಮೊದಲ ದಿನವಾಗಲಿದೆ. ಆ ದಿನ ಈ ವರ್ಷದ ಹಜ್ ನ ಮೊದಲ ದಿನವಾಗಲಿದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ಕೇವಲ ಸೌದಿ ಒಳಗಿರುವ 10 ಸಾವಿರ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶವಿದೆ.
Next Story