ಜು.24 ರಂದು ಕೆಸಿಎಫ್ ಅಬುಧಾಬಿ ಝೋನ್ ವತಿಯಿಂದ ರಕ್ತದಾನ ಶಿಬಿರ
ಅಬುಧಾನಿ, ಜು.22: 'ರಕ್ತದಾನ ಜೀವದಾನ' ಎಂಬ ಘೋಷ್ಯ ವಾಕ್ಯದೊಂದಿಗೆ ಕೆಸಿಎಫ್ ಯುಎಇ ಅಬುಧಾಬಿ ಝೋನ್ ವತಿಯಿಂದ ಜು.24 ರಂದು ಅಬುಧಾಬಿ ಖಾಲಿದಿಯಾ ಮಾಲ್ ಸಮೀಪದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ.
ಕೆಸಿಎಫ್ ಬ್ಲಡ್ ಸೈಬೋ ಇದರ ಅಧೀನದಲ್ಲಿ ನಡೆಯುವ ಈ ಶಿಬಿರವು ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ದೇಶದ ಕಾನೂನನ್ನು ಗೌರವಿಸಿ ತನ್ನ ಶಿಬಿರವನ್ನು ನಡೆಸಲಿದೆ. ಕೆಸಿಎಫ್ ಯುಎಇ ಘಟಕವು ಕಳೆದ ನಾಲ್ಕು ತಿಂಗಳ ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ಅನಿವಾಸಿ ಪ್ರವಾಸಿಗಳಿಗೆ, ಕೋವಿಡ್ ವೈರಸಿಗೆ ತುತ್ತಾದ ನೂರಾರು ರೋಗಿಗಳಿಗೆ ಹಾಗೂ ರಮಝಾನ್ ತಿಂಗಳ ಸಮಯದಲ್ಲಿ ಲಾಕ್ಡೌನ್ ತುರ್ತು ಪರಿಸ್ಥಿತಿ ಸಮಯದಲ್ಲಿ ಸಾವಿರಾರು ಅನಿವಾಸಿಗಳಿಗೆ ಜಾತಿ ಮತ ಭೇದವಿಲ್ಲದೆ ನೆರವಿನ ಹಸ್ತ ನೀಡಿದೆ ಹಾಗೂ ಸಂಕಷ್ಟಕ್ಕೊಳಗಾಗಿ ತಾಯ್ನಾಡಿಗೆ ಮರಳಲಾಗದ ಅನಿವಾಸಿ ಕನ್ನಡಿಗರಿಗೆ ತನ್ನ ದೇಶಕ್ಕೆ ಮರಳಲು ಚಾರ್ಟಡ್ ವಿಮಾನವನ್ನು ಒದಗಿಸುವ ಮೂಲಕ ಸಾರ್ವಜನಿಕ ಪ್ರಶಂಸನೆಗೆ ಒಳಗಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಶುಕ್ರವಾರ ನಡೆಯುವ ರಕ್ತದಾನ ಶಿಬಿರದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೆಸಿಎಫ್ ಅಬುಧಾಬಿ ಝೋನ್ ಘಟಕವು ಪ್ರಕಟಣೆಯಲ್ಲಿ ವಿನಂತಿಸಿದೆ.