ಯುಎಇ: ಈದುಲ್ ಅಝ್ ಹಾ ಮುನ್ನ 515 ಕೈದಿಗಳಿಗೆ ಅಧ್ಯಕ್ಷರಿಂದ ಕ್ಷಮಾದಾನ
ದುಬೈ, ಜು. 24: ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೇದ್ ಅಲ್ ನಹ್ಯಾನ್, ಈದ್ ಅಲ್ ಅದಾ ಮುನ್ನ ಜೈಲುಗಳಲ್ಲಿರುವ 515 ಕೈದಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ.
ಬಿಡುಗಡೆಗೊಂಡಿರುವ ಕೈದಿಗಳ ಆರ್ಥಿಕ ಸಂಕಷ್ಟವನ್ನು ನಿವಾರಿಸುವುದಾಗಿಯೂ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಕೌಟುಂಬಿಕ ಬಂಧವನ್ನು ಬಿಗಿಗೊಳಿಸುವ, ತಾಯಂದಿರು ಮತ್ತು ಮಕ್ಕಳಿಗೆ ಸಂತೋಷವನ್ನು ತರುವ ಹಾಗೂ ತಮ್ಮ ಭವಿಷ್ಯವನ್ನು ಪುನರ್ರೂಪಿಸಲು ಕೈದಿಗಳಿಗೆ ಅವಕಾಶವೊಂದನ್ನು ನೀಡುವ ಶೇಖ್ ಖಲೀಫರ ಪ್ರಯತ್ನಗಳ ಭಾಗವಾಗಿ ಈ ವಾರ್ಷಿಕ ಕ್ಷಮಾದಾನವನ್ನು ನಡೆಸಿಕೊಂಡು ಬರಲಾಗುತ್ತಿದೆ.
Next Story