ದುಬೈ, ಟೆಲ್ ಅವೀವ್ ವಾಣಿಜ್ಯ ಸಂಸ್ಥೆಗಳ ನಡುವೆ ಒಪ್ಪಂದ
ದುಬೈ, ಸೆ. 24: ದುಬೈ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಇಸ್ರೇಲ್ನ ಟೆಲ್ ಅವೀವ್ ವಾಣಿಜ್ಯ ಸಂಸ್ಥೆಗಳು ದ್ವಿಪಕ್ಷೀಯ ಸಹಕಾರಕ್ಕೆ ಅವಕಾಶ ಮಾಡಿಕೊಡುವ ಭಾಗೀದಾರಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಶಾಂತಿ, ಮಾತುಕತೆ ಮತ್ತು ಸ್ಥಿರತೆಯನ್ನು ಬಲಪಡಿಸುವುದಕ್ಕಾಗಿ ಹಾಗೂ ಸಹ್ಯ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ಇಸ್ರೇಲ್ ಮತ್ತು ಯುಎಇ ನಡುವೆ ಏರ್ಪಟ್ಟಿರುವ ವಿಸ್ತೃತ ಒಪ್ಪಂದದ ಭಾಗವಾಗಿ ಉಭಯ ದೇಶಗಳ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವೆ ಈ ಒಪ್ಪಂದ ಏರ್ಪಟ್ಟಿದೆ.
Next Story