ಜುಬೈಲ್: ಕೆಸಿಎಫ್ನಿಂದ ಟಿಪ್ಪುಜೀವನ ಮತ್ತು ಹೋರಾಟ ಕಾರ್ಯಕ್ರಮ
ಜುಬೈಲ್, ನ.15: ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ ಟಿಪ್ಪುಸುಲ್ತಾನ್ ದಿನಾಚರಣೆ ನಡೆಸಲಾಯಿತು.
ಜುಬೈಲ್ನ ಕೆಸಿಎಫ್ ಆಡಿಟೋರಿಯಂನಲ್ಲಿ ಜರಗಿದ ಟಿಪ್ಪು ‘ಜೀವನ ಮತ್ತು ಹೋರಾಟ’ ಕಾರ್ಯಕ್ರಮವನ್ನು ಜುಬೈಲ್ ಸೆಕ್ಟರ್ ಅಧ್ಯಕ್ಷ ಹನೀಫ್ ಸಅದಿ ಉದ್ಘಾಟಿಸಿದರು.
ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷ ಕಮರುದ್ದೀನ್ ಗೂಡಿನಬಳಿ ಟಿಪ್ಪುಜೀವನ ಮತ್ತು ಹೋರಾಟದ ಕುರಿತು ವಿಷಯ ಮಂಡಿಸಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ನಾಯಕರಾದ ಎನ್.ಎಸ್.ಅಬ್ದುಲ್ಲ ಉಪಸ್ಥಿತರಿದ್ದರು. ನಾಲ್ಕು ಸೆಕ್ಟರ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸ್ವಾಗತಿಸಿದರು. ಅದ್ನಾನ್ ಪೊಲಬೆ ವಂದಿಸಿದರು.
Next Story