ಮದೀನದಲ್ಲಿ ಅಪಘಾತ: ಭಾರತದ ನರ್ಸ್ ಮೃತ್ಯು
ಮದೀನ, ಡಿ. 2: ಪತ್ತನಂತಿಟ್ಟ ತಿರುವಲ್ಲದ ಜಿನ್ಸಿ ಗ್ರೇಸ್ ಜೇಕಬ್(24) ಮದೀನದಲ್ಲಿ ನಡೆದ ವಾಹನ ಅಪಘಾತದಿಂದ ಮೃತರಾಗಿದ್ದಾರೆಂದು ವರದಿಯಾಗಿದೆ. ಬುಧವಾರ ರಾತ್ರಿ ಎಂಟುಗಂಟೆಗೆ ಉಹುದ್ ಆಸ್ಪತ್ರೆ ಸಮೀಪ ಅಪಘಾತ ಸಂಭವಿಸಿತ್ತು. ಸೂಪರ್ ಮಾರ್ಕೆಟಿನಿಂದ ಸಾಮಾನು ಖರೀದಿಸಿ ರಸ್ತೆದಾಟುವಾಗ ಸೌದಿ ಪ್ರಜೆಯೊಬ್ಬ ಚಲಾಯಿಸುತ್ತಿದ್ದ ಕಾರು ಬಂದು ಢಿಕ್ಕಿಹೊಡೆದಿತ್ತು.ಜಿನ್ಸಿಗ್ರೇಸ್ರನ್ನು ಅವರು ಕೆಲಸಮಾಡುತ್ತಿದ್ದ ಉಹುದ್ ಆಸ್ಪತ್ರೆಗೆ ಕರೆತರಲಾದರೂ ಅವರು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಅವರು ಆಸ್ಪತ್ರೆಯಲ್ಲಿ ನರ್ಸ್ಆಗಿ ಕೆಲಸಕ್ಕೆ ಸೇರಿದ್ದರು. ಜಿದ್ದದಲ್ಲಿರುವ ಜಿನ್ಸಿಯ ತಾಯಿ ಮದೀನಕ್ಕೆ ತಲುಪಿದ್ದಾರೆ. ಮೀಕಾತ್ ಮೋರ್ಚರಿಯಲ್ಲಿ ಜಿನ್ಸಿ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಕಾನೂನು ಕ್ರಮಗಳನ್ನು ಪೂರ್ತಿಗೊಳಿಸಿದ ಬಳಿಕ ಅದನ್ನು ಊರಿಗೆ ತರಲಾಗುವುದು ಎಂದು ವರದಿ ತಿಳಿಸಿದೆ.
Next Story