ಶಾರ್ಜ: ಈಜುಕೊಳದಲ್ಲಿ ಮುಳುಗಿ ಭಾರತದ ವ್ಯಕ್ತಿ ಮೃತ್ಯು
ಶಾರ್ಜ,ಡಿ. 5: ಶಾರ್ಜ ಅಲ್ನಹ್ದದ ಕಟ್ಟಡವೊಂದರಲ್ಲಿರುವ ಈಜುಕೊಳದಲ್ಲಿ ಮುಳುಗಿ ಭಾರತದ ಮೂವತ್ತೆಂಟು ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆಂದು ಶಾರ್ಜ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಘಟನೆ ಶನಿವಾರ ನಡೆದಿದೆ. ಸಾವಿಗೆ ಏನು ಕಾರಣವೆಂದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಯಾವಾಗಲೂ ಬೆಳಗ್ಗೆ ಈಜುಕೊಳಕ್ಕೆ ಭೇಟಿ ನೀಡುತ್ತಿದ್ದ ವ್ಯಕ್ತಿಯಾಗಿದ್ದು ಹೃದಯಾಘಾತದಿಂದಾಗಿ ನೀರಿನಲ್ಲಿ ಮುಳುಗಿ ಮೃತರಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ವಿಷಯ ತಿಳಿದು ಪೊಲೀಸರು, ಫಾರೆನ್ಸಿಕ್, ಪ್ಯಾರಾಮೆಡಿಕಲ್, ಆಂಬುಲೆನ್ಸ್ ವಿಭಾಗಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರು. ಪ್ರಯೋಜನವಾಗಲಿಲ್ಲ. ಮೃತದೇಹವವನ್ನು ಫಾರೆನ್ಸಿಕ್ ಲ್ಯಾಬ್ಗೆ ರವಾನಿಸಲಾಗಿದ್ದು, ವ್ಯಕ್ತಿಯ ಸರಿಯಾದ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
Next Story