ಮಸ್ಕತ್ನಲ್ಲಿ ‘ಬಹುರಾಷ್ಟ್ರೀಯ’ ಸಾಮೂಹಿಕ ವಿವಾಹ !
ಮಸ್ಕತ್,ಜ.11: ವಿದೇಶಿಯರೂ ಒಳಗೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮ ಮಸ್ಕತ್ ಸಮೀಪದ ಬರ್ಕದಲ್ಲಿ ಪ್ರಥಮ ಬಾರಿ ನಡೆದಿದೆ. ಸಾಮೂಹಿಕ ವಿವಾಹ ವಿವಾಹದ ವೆಚ್ಚವನ್ನು ಪ್ರದೇಶದ ಉದ್ಯಮಿಗಳು ಭರಿಸಿದ್ದಾರೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳ ವಧುವರರು ಕಾರ್ಯಕ್ರಮದಲ್ಲಿ ವಿವಾಹಿತರಾದರು. ವಧುಗಳಿಗೆ ವಿಶೇಷ ಉಡುಗೊರೆ ನೀಡಲಾಗಿದೆ. ಪರಿಸರದ ಪ್ರಮುಖರು ಹಾಗೂ ಹಲವಾರು ಮಂದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪ್ರದೇಶದ ಜನರ ನೆರವಿನಲ್ಲಿ ಪ್ರತೀ ವರ್ಷವೂ ಎರಡು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಎಂದು ಸಂಘಟಕರು ಹೇಳಿದ್ದಾರೆ. ವಿವಾಹ ಸಮಾರಂಭ ಸರಳವಾಗಿ ನಡೆದಿದ್ದು, ವಿವಾಹದ ಖರ್ಚು ವೆಚ್ಚ ಕಡಿಮೆಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story